ದಿವಂಗತ ಗಣೇಶ್ ಬಂಗೇರ ಕೊಪ್ಪಲಕಾಡು ಅವರ ನೆನಪಿನಲ್ಲಿ DYFI ಯಯ್ಯಾಡಿ ಕೊಂಚಾಡಿ ಘಟಕದಿಂದ ರಕ್ತದಾನ ಶಿಬಿರ

ದಿವಂಗತ ಗಣೇಶ್ ಬಂಗೇರ ಕೊಪ್ಪಲಕಾಡು ಅವರ ನೆನಪಿನಲ್ಲಿ DYFI ಯಯ್ಯಾಡಿ ಕೊಂಚಾಡಿ ಘಟಕದಿಂದ ರಕ್ತದಾನ ಶಿಬಿರ


ಕೊಂಚಾಡಿ: ದಿವಂಗತ ಗಣೇಶ್ ಬಂಗೇರ ಕೊಪ್ಪಳಕಾಡು ಅವರ ನೆನಪಿನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಯಯ್ಯಾಡಿ–ಕೊಂಚಾಡಿ ಘಟಕದ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದೊಂದಿಗೆ ನವೆಂಬರ್ 15ರಂದು ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಕೊಂಚಾಡಿಯ ಶ್ರೀರಾಮಾಶ್ರಮ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.


DYFI ಕೊಂಚಾಡಿ ಘಟಕದ ಅಧ್ಯಕ್ಷ ವೆಂಕಟೇಶ್ ಕೊಂಚಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು DYFI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮನೋಜ್ ವಾಮಂಜೂರು ಅವರು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಉಮೇಶ್ ದಂಡಕೇರಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಲಯನ್ಸ್ ಕ್ಲಬ್ ಕುಳೂರ್ ವಿಭಾಗದ ಅಧ್ಯಕ್ಷರು ಹರ್ಷವರ್ಧನ್ ಹಾಗೂ ಲಯನ್ಸ್ ಕ್ಲಬ್  ಎನ್.ಜೆ. ನಾಗೇಶ್ ಕುಮಾರ್ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ DYFI ಮುಖಂಡರಾದ ಸುನಂದ ಕೊಂಚಾಡಿ ಹಾಗೂ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರು ಪ್ರಮುಖರು ಉಪಸ್ಥಿತರಿದ್ದರು.


ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದೆ ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಶಿಬಿರದಲ್ಲಿ ಯಯ್ಯಾಡಿ ಕೊಂಚಾಡಿ ಭಾಗದ ಸ್ಥಳೀಯರು ಯುವಜನರು ಹಾಗೂ DYFI ಕಾರ್ಯಕರ್ತರು ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.


ಕಾರ್ಯಕ್ರಮದ ಆರಂಭದಲ್ಲಿ ನವೀನ್ ಬೊಲ್ಪುಗುಡ್ಡೆ ಅವರು ಸ್ವಾಗತಿಸಿದರು. ಕೊನೆಯಲ್ಲಿ ಕೊಂಚಾಡಿಯ ರಾಜ್ ಕುಮಾರ್ ಅವರು ವಂದನಾರ್ಪಣೆ ಸಲ್ಲಿಸಿದರು.

ದಿವಂಗತ ಗಣೇಶ್ ಬಂಗೇರ ಅವರ ಸ್ಮರಣೆಯನ್ನು ಮಾನವೀಯ ಸೇವೆಯ ಮೂಲಕ ಅರ್ಥಪೂರ್ಣಗೊಳಿಸಿದ ಈ ರಕ್ತದಾನ ಶಿಬಿರವು  ಯಶಸ್ವಿಯಾಗಿ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article