ಅಜುಮ್ ಅಲ್ ಬಿರ್ರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
Monday, November 16, 2026
ಮೂಡುಬಿದಿರೆ: ಮೂಡುಬಿದಿರೆಯ ಅಜುಮ್ ಅಲ್ ಬಿರ್ರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ನ.14 ರಂದು ನಡೆಯಿತು.
ಖ್ಯಾತ ಅಥ್ಲೀಟ್ ಅಮ್ರೀನ್, ವಿದ್ವಾಂಸರಾದ ಡಾ.ಶಮೀಮ್ ಮುಹಮ್ಮದ್ ಮೌಲ್ವಿ (ಬಿಎಂಸಿ ,ಮುಂಬೈ) ಹಾಗೂ ಮೈಸೂರಿನ ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ನಾಗೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡೆಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಹಾರೈಸಿದರು.
ಶಾಲೆಯ ಕಾರ್ಯದರ್ಶಿ ಅಝೀಝ್ ಮಾಲಿಕ್ ಅವರು ಮಾತನಾಡಿ ' ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ,ಶಿಸ್ತು ಮತ್ತು ಕ್ರೀಡಾ ಮನೋಭಾವ ವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.
ಟ್ರಸ್ಟಿ ಅಲ್ತಾಫ್, ಕೋಶಾಧಿಕಾರಿ ಯು.ಕೆ.ಮುಹಮ್ಮದ್ ಇರ್ಫಾನ್, ಸದಸ್ಯರಾದ ಅಬ್ದುಲ್ ಗಫೂರ್ ಹಾಗೂ ಅಶ್ರಫ್ ಮರೋಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ನಾಝಿಯಾ ಅವರು ಸ್ವಾಗತಿಸಿ ಶಿಕ್ಷಕಿ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.
ಈ ವಾರ್ಷಿಕ ಕ್ರೀಡಾಕೂಟದಲ್ಲಿ ಮುಹಮ್ಮದ್ ಅಯಾನ್ ಹಾಗೂ ನೂಹ್ ಶೆಹ್ರಾಝ್ ಶೇಖ್ ಅವರು ವೈಯಕ್ತಿಕ ಚಾಂಪಿಯನ್ ಗಳಾಗಿ ಹೊರಹೊಮ್ಮಿ ಶಾಲೆಗೆ ಕೀರ್ತಿ ತಂದಿದ್ದಾರೆ.