ಕನ್ನಡಭಿಮಾನ ಡಾ. ರಾಜ್ ಸಂಘಟನೆ ಕುಂದಾಪುರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡಭಿಮಾನ ಡಾ. ರಾಜ್ ಸಂಘಟನೆ ಕುಂದಾಪುರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ


ಕುಂದಾಪುರ: 71ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕನ್ನಡಭಿಮಾನ ಡಾ. ರಾಜ್ ಸಂಘಟನೆಯು ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಯ ಜೊತೆಗೂಡಿ ಆಚರಿಸಲಾಯಿತು.


ಅಧ್ಯಕ್ಷ ರತ್ನಾಕರ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡುವ ಮೂಲಕ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 


ಹಿರಿಯ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿಯವರು ಕನ್ನಡ ಧ್ವಜಾರೋಹಣ ಮಾಡಿದರು ಲಯನ್ಸ್ ಕ್ಲಬ್ ನ ಕುಂದಾಪುರ ಸಿಟಿ ಯ ಅಧ್ಯಕ್ಷರಾದ ಪ್ರಸಾದ್ ಕೋಡಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. 


ಹುಸೇನ್ ಹೈಕಾಡಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ ಸಂಘಟನೆಯ ಅವಿನಾಭಾವ ಸಂಬಂಧದ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ತುಂಬಾ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನರಸಿಂಹ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ನಂತರ ಕುಂದಾಪುರ ಹೊಸ ನಿಲ್ದಾಣದಿಂದ ಕೋಟೇಶ್ವರ ಮಾರ್ಗವಾಗಿ ಕುಂದಾಪುರ ಸುತ್ತುವರಿದ ವಾಹನ ಜಾಥಾ ಸಮಪನಗೊಂಡಿತು. 


ಸುನಿಲ್ ಖಾರ್ವಿ ತಲ್ಲೂರು ಅವರು ಸ್ವಾಗತಿಸಿದರು. ಅಗಸ್ಟಿನ್ ಡಿಸೋಜ ವಂದಿಸಿದರು. ಹರ್ಷವರ್ಧನ್ ಖಾರ್ವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ. ರಾಜ್ ಸಂಘಟನೆಯ ಪದಾಧಿಕಾರಿಗಳಾದ, ಶ್ರೀಧರ್ ಗಾಣಿಗ, ಪ್ರಭಾಕರ್ ಖಾರ್ವಿ, ನವೀನ್ ಕುಮಾರ್, ಶ್ರೀಧರ್ ಕೋಟೆ, ಶಿವರಾಜ್ ತಲ್ಲೂರು ದುಂಡಿರಾಜ್, ವಿಘ್ನಶ್ ಖಾರ್ವಿ ಪಚ್ಚಿ ಶೈನ್ ರಾಮಚಂದ್ರ, ನಾಗರಾಜ್ ಖಾರ್ವಿ, ಶಾನ್, ಗಾಳಿ ಸಚಿನ್ ಖಾರ್ವಿ, ಉದಯ ಶೆಟ್ಟಿ, ನಾರಾಯಣ ಗಾಣಿಗ ತಕ್ಕಟ್ಟೆ, ರಂಜಿತ್,ಸಾಗರ್ ಪೂಜಾರಿ, ಹಾಗೂ ಲಯನ್ಸ್ ಕ್ಲಬ್ ಮತ್ತು ಸಂಘದ ಇನ್ನಿತರ ಸದಸ್ಯರ ಸಹಿತ ಸಾರ್ವಜನಿಕರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article