ರಸ್ತೆ ಗುಂಡಿಗೆ ಬಿದ್ದ ವ್ಯಕ್ತಿ: ಎಂ.ಪಿ, ಎಂ.ಎಲ್.ಎ ಬಾರದೆ ಎದ್ದೇಳಲ್ಲಾ ಎಂದು ಬೈಕ್ ಇಟ್ಟು ಪ್ರತಿಭಟನೆ
ಮೂಡುಬಿದಿರೆ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ವ್ಯಕ್ತಿಯೋವ೯ರು ಆಕ್ರೋಶಗೊಂಡು ಎಂ.ಪಿ, ಎಂ.ಎಲ್.ಎ ಇಲ್ಲಿಗೆ ಬರಬೇಕು ಅಲ್ಲಿವರೆಗೆ ನಾನು ಎದ್ದೇಳಲ್ಲಾ ಎಂದು ತನ್ನ ಬೈಕನ್ನು ರಸ್ತೆಯ ಮೇಲಿಟ್ಟು ಪ್ರತಿಭಟಿಸಿದ ಘಟನೆ ಸೋಮವಾರ ರಾತ್ರಿ ಮಹಾವೀರ ಕಾಲೇಜು ಬಳಿ ನಡೆದಿದೆ.
ಮೂಡುಬಿದಿರೆ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಮಹಾವೀರ ಕಾಲೇಜು ಬಳಿಯ ರಸ್ತೆಯು ಹೊಂಡಗಳಿಂದ ತುಂಬಿಕೊಂಡಿದ್ದು ಇಲ್ಲಿ ವಾಹನ ಸಂಚಾರಕ್ಕೆ ಕಷ್ಟ ಸಾಧ್ಯವಾಗಿದೆ. ಇದನ್ನು ಗಮನಿಸದ ವ್ಯಕ್ತಿಯೋವ೯ರು ರಾತ್ರಿ ಸಂಚರಿಸುವಾಗ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ.
ಮತ ಕೇಳಲು ಬರುವ ರಾಜಕರಣಿಗಳು ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡು ಹದಗೆಟ್ಟಿರುವ ರಸ್ತೆಯ ಪರಿಸ್ಥಿತಿಯನ್ನು ನೋಡಿ ಸರಿ ಪಡಿಸುವುದಿಲ್ಲವೆಂದು ಆಕ್ರೋಶಗೊಂಡರು ಮತ್ತು ಅವರಿಬ್ಬರೂ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಾಗ ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಮೇಲೇಲದೆ ಇರುವುದರಿಂದ ವ್ಯಕ್ತಿಯ ಜತೆ ಮಾತಿನ ಚಕಾಮಕಿ ನಡೆದಿದೆ.
ಈ ಸಂದಭ೯ ಸಾವ೯ಜನಿಕರು ಕೂಡಾ ಪ್ರತಿಭಟನೆ ನಿರತ ವ್ಯಕ್ತಿಗೆ ಬೆಂಬಲ ಸೂಚಿಸಿ ರಸ್ತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ನಂತರ ಪೊಲೀಸರು ಬಿದ್ದು ಗಾಯಗೊಂಡಿರುವ ವ್ಯಕ್ತಿಯನ್ನು ಸಮಧಾನ ಪಡಿಸಿ, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದನ್ನು ಗಮನಕ್ಕೆ ತಂದು ರಸ್ತೆಯಿಂದ ಎಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆ.