ನ.15 ರಂದು ಕಿಟ್ಟೆಲ್ ಫೌಂಡೇಶನ್ ಪ್ರಶಸ್ತಿ ಪ್ರದಾನ

ನ.15 ರಂದು ಕಿಟ್ಟೆಲ್ ಫೌಂಡೇಶನ್ ಪ್ರಶಸ್ತಿ ಪ್ರದಾನ

ಮಂಗಳೂರು: ಕರ್ನಾಟಕ ಥಿಯಲಾಜಿಕಲ್ ಕಾಲೇಜು ಆಶ್ರಯದಲ್ಲಿ ರೆ.ಡಾ. ಫರ್ಡಿನಾಂಡ್ ಕಿಟ್ಟೆಲ್ ಫೌಂಡೇಶನ್ ವತಿಯಿಂದ ನೀಡಲಾಗುವ ಪ್ರಶಸ್ತಿ ಪ್ರದಾನ ಸಮಾರಂಭ ನ. 15ರಂದು ಬೆಳಗ್ಗೆ 11.30ಕ್ಕೆ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.

ಮಂಗಳೂರು ಪ್ರೆsಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಫೌಂಡೇಶನ್ನ ಅಧ್ಯಕ್ಷ ರೆ.ಡಾ. ಎಚ್.ಎಂ. ವಾಟ್ಸನ್, ಪ್ರಸಕ್ತ ಸಾಲಿನ ರೆ.ಡಾ. ಫರ್ಡಿನಾಂಡ್ ಕಿಟ್ಟೆಲ್ ಪ್ರಶಸ್ತಿಗೆ ಮಂಗಳೂರಿನ ಪ್ರೊ. ಡಾ. ಎ.ವಿ. ನಾವಡ ಹಾಗೂ ಧಾರವಾಡದ ಪ್ರೊ. ಡಾ. ವೀರಣ್ಣ ರಾಜೂರ ಅವರು ಆಯ್ಕೆಯಾಗಿದ್ದಾರೆ. ಕಿಟ್ಟೆಲ್ ಅವರ ಜೀವನ ಮತ್ತು ಕೃತಿಗಳ ಕುರಿತು ಸಂಶೋಧನೆ, ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 25,000 ರೂ. ನಗದು ಹಾಗೂ ರೆ.ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರ ಸ್ಮರಣಾರ್ಥ ರೂಪಿಸಲಾದ ಕಿರು ಸ್ಮರಣಿಕೆಯ ಪ್ರತಿಮೆ ಒಳಗೊಂಡಿರುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಹಾಗೂ ಆಯ್ಕೆ ಸಮಿತಿಯ ಸದಸ್ಯ ಡಾ. ಧನಂಜಯ ಕುಂಬ್ಳೆ ಅವರು ಅಭಿನಂದನಾ ನುಡಿಗಳನಾಡಲಿದ್ದಾರೆ. 

ಕಾಸೆಸ್ ಅಧ್ಯಕ್ಷ ಹಾಗೂ ಕೆಎಸ್ಡಿ ಸಭಾ ಪ್ರಾಂತ್ಯದ ಬಿಷಪ್ ರೈ.ರೆ. ಹೇಮಚಂದ್ರ ಕುಮಾರ್, ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಪರೊ. ಡಾ.ಎಸ್. ಜಾಫೆಟ್, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡ ನಿಘಂಟು ಮತ್ತು ಭಾಷಾ ಸಾಹಿತ್ಯದಲ್ಲಿ ಕೊಡುಗೆ ನೀಡಿರುವ ರೆ.ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರ ಸ್ಮರಣೆಯನ್ನು ಮುಂದುವರಿಸುವ ಜತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿದ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶ ಎಂದು ಅವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ರೆ.ಡಾ. ಸಂದೀಪ್ ಥಿಯೋಫಿಲ್, ಸದಸ್ಯರಾದ ರೆ.ಡಾ. ಎಫ್. ಅನಿಲ್ ಕುಮಾರ್, ರೆ.ಕೆ. ಸಾಗರ್ ಸುಂದರ್‌ರಾಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article