ನ.14ರಂದು ಗೂಡುದೀಪ ಸಂಗಮ-2026

ನ.14ರಂದು ಗೂಡುದೀಪ ಸಂಗಮ-2026


ಉಳ್ಳಾಲ‌: ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಗೂಡುದೀಪ ಸ್ಪರ್ಧಾ ಸಮಿತಿ ಆಶ್ರಯದಲ್ಲಿ 18ನೇ ವರ್ಷದ 'ಗೂಡುದೀಪ ಸಂಗಮ-2026-27ನೇ ವರ್ಷದ ಸ್ಪರ್ಧೆ ನ.14ರಂದು ಸಂಜೆ 5ರಿಂದ ತೊಕ್ಕೊಟ್ಟು ಒಳಪೇಟೆ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ  ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೀವನ್ ತೊಕ್ಕೊಟ್ಟು ತಿಳಿಸಿದರು.

ಬುಧವಾರ ತೊಕ್ಕೊಟ್ಟಿನಲ್ಲಿ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲ   ಮಾತನಾಡಿದ ಅವರು, ಸಾ‌ಂಪ್ರದಾಯಿಕ, ಆಧುನಿಕ ಮತ್ತು ಪ್ರಾಕೃತಿಕ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಅಲ್ಲದೆ  ಭಗತ್ ಸಿಂಗ್ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಈ ಬಾರಿ ಸಮಾಜ ಸೇವೆಗಾಗಿ ಶ್ರೀಧರ್ ಶೆಟ್ಟಿ ಪುಳಿಂಚ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ‌ ಎಂದರು.

ಎಲ್ಲಾ ವಿಭಾಗದಲ್ಲಿ ಪ್ರಥಮ ಬಹುಮಾನ 7001 ನಗದು ಹಾಗೂ ಸ್ಮರಣಿಕೆ , ದ್ವಿತೀಯ 5001 ನಗದು ಮತ್ತು ಸ್ಮರಣಿಕೆ, ತೃತೀಯ ರೂ 3001 ನಗದು ಮತ್ತು ಸ್ಮರಣಿಕೆ ನೀಡಲಾಗುವುದು ಎಂದರು.  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳ ನೃತ್ಯ ವೈಭವ, ರಾತ್ರಿ 9 ಗಂಟೆಗೆ 'ಬ್ತಹ್ಮರಕ್ಕಸೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ಗೂಡುದೀಪ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ ಕುಂಪಲ, ಗೂಡುದೀಪ ಸಹಸಂಚಾಲಕ ಲಕ್ಷ್ಮಿ ನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article