ಬಿಜೆಪಿಯ ಪಾದಯಾತ್ರೆ ಅಭೂತಪೂರ್ವ ಯಶಸ್ವಿ, ಕಾಂಗ್ರೆಸ್ ಸರ್ಕಾರದ ನಿರ್ಗಮನಕ್ಕೆ ಜನತೆಯ ಸ್ಪಷ್ಟ ಸಂದೇಶ: ಸತೀಶ್ ಕುಂಪಲ

ಬಿಜೆಪಿಯ ಪಾದಯಾತ್ರೆ ಅಭೂತಪೂರ್ವ ಯಶಸ್ವಿ, ಕಾಂಗ್ರೆಸ್ ಸರ್ಕಾರದ ನಿರ್ಗಮನಕ್ಕೆ ಜನತೆಯ ಸ್ಪಷ್ಟ ಸಂದೇಶ: ಸತೀಶ್ ಕುಂಪಲ

ಮಂಗಳೂರು: ಮಂಗಳೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಪಾದಾಯಾತ್ರೆ ಮತ್ತು ಪ್ರತಿಭಟನೆಗೆ ಸೇರಿದ ಸಹಸ್ರ ಸಹಸ್ರ ಸಂಖ್ಯೆಯ ಜನಸ್ತೋಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಗಮನಕ್ಕೆ ಮತ್ತು ರಾಹುಲ್ ಗಾಂಧಿ ಮತ್ತು ವಿಪಕ್ಷದವರು ದೇಶ ವಿರೋಧಿ ಶಕ್ತಿಗಳ ಜತೆ ಸೇರಿಕೊಂಡು ಮಿಥ್ಯಾರೋಪಗಳ ಮೂಲಕ ನಡೆಸುತ್ತಿರುವ ಅರಾಜಕತೆಗೆ ಜನತೆ ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರೋಪಾದಿಯಲ್ಲಿ ನಗರದಲ್ಲಿ ಜನರು ಬರುವ ಮೂಲಕ ನರೇಂದ್ರ ಮೋದಿಯವರ ಆಡಳಿತಕ್ಕೆ ನಮ್ಮ ಬೆಂಬಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಿಟ್ಟಿ ಭಾಗ್ಯ, ಮಂಗ ಮಾಡಲು ನಡೆಸಿದ ಕ್ಯಾಬಿನೆಟ್ ಸಭೆಗಳನ್ನು ಜನ ತಿರಸ್ಕರಿಸಿದ್ದಾರೆ. ದೇಶ ಮುಖ್ಯ, ನೆಮ್ಮದಿಯ ಬದುಕು ಮುಖ್ಯ, ದೇಶ ವಿರೋಧಿ ಶಕ್ತಿಗಳ ನಿರ್ಮೂಲನೆಯೇ ಆದ್ಯತೆಯಾಗಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದು ಅಗತ್ಯ ಎನ್ನುವುದನ್ನು ಜಿಲ್ಲೆಯ ಜನತೆ ತೋರಿಸಿದ್ದಾರೆ, ಜಿಲ್ಲೆಯ ಪಕ್ಷದ ಜನಪ್ರತಿನಿಧಿಗಳ ಪ್ರಾಮಾಣಿಕ ಕಾರ್ಯ ಮತ್ತು ಪಕ್ಷದ ಕಾರ್ಯಕರ್ತರ ಸೇವೆಗೆ ಪ್ರತಿಭಟನೆಯ ಯಶಸ್ವಿ ಮೂಲಕ ಜನತೆ ಆಶೀರ್ವದಿಸಿದ್ದಾರೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article