ಮನಸ್ಸಿನ ಶಾಂತಿ ನೆಮ್ಮದಿಗೆ ಯೋಗ: ಸ್ವಾಮಿ ಯುಗೇಶಾನಂದಜೀ

ಮನಸ್ಸಿನ ಶಾಂತಿ ನೆಮ್ಮದಿಗೆ ಯೋಗ: ಸ್ವಾಮಿ ಯುಗೇಶಾನಂದಜೀ


ಮಂಗಳೂರು: ಮನಸ್ಸಿನಲ್ಲಿ ಬರುವ ಎಲ್ಲಾ ಯೋಚನೆ ಕಲ್ಪನೆಗಳನ್ನು ಸಂಪೂರ್ಣ ಲಯವಾಗಿಸಿ ಮನಸ್ಸನ್ನು ಶಾಂತ ಸ್ಥಿತಿಗೆ ತರುವ ಕಲೆಯ ಯೋಗ. ಇದರ ನಿಯಂತ್ರಣಕ್ಕೆ ಯೋಗ, ಮುದ್ರೆ, ಸಹಕಾರಿ. ಮನಸ್ಸನ್ನು ನಿಯಂತ್ರಣಯಾ ಹತೋಟಿಯಲ್ಲಿಡಲು ತಿಳಿದಿರಬೇಕು ಎಂದು ಶ್ರೀ ರಾಮಕೃಷ್ಣ ಮಠದ ಬಾಲಕಾಶ್ರಮದ ವಾರ್ಡನ್ ಸ್ವಾಮಿ ಯುಗೇಶಾನಂದಜೀ ಹೇಳಿದರು.


ಅವರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ರಾಮಕೃಷ್ಣ ಮಠ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದೊಂದಿಗೆ ಜರುಗುವ ನವಂಬರ ತಿಂಗಳ ಎರಡು ವಾರಗಳ ಕಾಲ ಜರುಗುವ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವದಿಸಿದರು.


ಮನಸ್ಸಿನ ಹತೋಟಿಗೆ ಯೋಗ ಸಹಕಾರಿಯಾಗುತ್ತದೆ. ಯೋಗದ ತರಗತಿಗೆ ಹೋಗಿ ಕೆಲವು ತಿಂಗಳು ಅಭ್ಯಾಸ ಮಾಡಿ ಆ ಮೇಲೆ ಮನೆಯಲ್ಲಿ ಅಭ್ಯಾಸ ಮಾಡಲು ಕಷ್ಟ ಸಾಧ್ಯವಾಗಬಹುದು. ಯಾರಿಗೆ ಮನೆಯಲ್ಲಿ ಒಬ್ಬರಿಗೆ ಯೋಗ ಅಭ್ಯಾಸ ಮಾಡಲು ಕಷ್ಟವಾಗುತ್ತದೆ ಅಂಥವರು ಸಾಮೂಹಿಕವಾಗಿ ಒಟ್ಟಾಗಿ ಯೋಗ ಅಭ್ಯಾಸ ಮಾಡಬೇಕು. (ಯೋಗ ಕೇಂದ್ರದಲ್ಲಿ) ಸ್ವಚ್ಚವಾಗಿ ಗಾಳಿ ಬೆಳಕಿನ ವಿಶಾಲವಾದ ಪ್ರದೇಶದಲ್ಲಿ ಸಾಮೂಹಿಕವಾಗಿ ಯೋಗ ಅಭ್ಯಾಸ ಮಾಡಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ, ನಿಯಮ ಮತ್ತು ಮುದ್ರೆಗಳ ಪ್ರಯೋಜನಗಳನ್ನು ತಿಳಿಸಿದರು. 


ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ಪತಂಜಲಿ ಋಷಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗಗಳನ್ನು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ತನ್ನ ಜೀವನದಲ್ಲಿ ಅಳವಡಿಸಿಕೊಡಾಗ ಜೀವನ ಶೈಲಿಯು ಉತ್ತಮಗೊಳ್ಳುವುದು ಎಂದರು.

ಸುಮಾ, ಚಂದ್ರಹಾಸ ಬಾಳ, ಪ್ರಭಾಕರ ಶರ್ಮ, ರಘುರಾಮ ಉಪಾಧ್ಯಾಯ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article