ಕಾರ್ಕಳ ತೆಳ್ಳಾರಿನ ದಿನೇಶ್ ಪೂಜಾರಿ ಸಾವಿನ ತನಿಖೆಯಾಗಬೇಕು: ಶುಭದ ರಾವ್ ಅಗ್ರಹ
ಪೆರ್ಡೂರು ಪ್ರಕರಣ ಶಾಸಕ ಸುನೀಲ್ ಕುಮಾರ್ ಬಗ್ಗೆ ಎಚ್ಚರವಿರಲಿ
ಈ ಪ್ರಕರಣದ ಮೊದಲ ಸಂತ್ರಸ್ಥೆ ಯುವತಿ ಅವಳಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ಎರಡನೇ ಸಂತ್ರಸ್ತ ಪ್ರದೀಪ್ ಪೂಜಾರಿ ಅವನ ಸಾವಿಗೂ ನ್ಯಾಯ ಸಿಗಬೇಕು ಎರಡೂ ಕಡೆಯ ನೋವು ಮತ್ತು ದುಃಖದಲ್ಲಿ ನಾವು ಸಮಾನವಾಗಿ ಭಾಗಿಯಾಗುತ್ತೇವೆ ಅವರಿಬ್ಬರಿಗೂ ಸಿಗಬೇಕಾದ ನ್ಯಾಯದ ಹೋರಾಟದಲ್ಲಿ ನಾವೂ ಸಮಾನವಾಗಿ ಭಾಗಿಯಾಗುತ್ತೇವೆ.
ಈ ಪ್ರಕರಣದ ಬಗ್ಗೆ ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿಯವರು ಈಗಾಗಲೇ ಸ್ಪಷ್ಟವಾದ ಮಾಹಿತಿಯನ್ನು ಜನತೆಗೆ ನೀಡಿದ್ದಾರೆ ಆದರೆ ಪ್ರೇಮ ದ್ವೇಷವಾಗಿ ಮಾರ್ಪಟು ಸಾವಿನಲ್ಲಿ ಅಂತ್ಯವಾಗಲು ಪ್ರಮುಖ ಕಾರಣ ಏನು ಎನ್ನುವುದನ್ನು ಅವರು ಪತ್ತೆ ಹಚ್ಚಿ ಜನತೆ ಮುಂದಿಡುತ್ತಾರೆ ಎನ್ನುವ ಭರವಸೆಯಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿದರು.
ಕಾರ್ಕಳ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣದಲ ಯುವಕ ಯುವತಿ ಎರಡು ಪ್ರಮುಖ ಸಮಾಜದವರು. ಆ ಎರಡೂ ಸಮಾಜಗಳು ಈ ನೆಲದ ಶಾಂತಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಬಹುದೊಡ್ಡ ಕೊಡುಗೆ ಇದೆ ಅವರೆಲ್ಲರೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ ಯಾಕೆಂದರೆ ಪರಸ್ಪರ ಎರಡು ಸಮಾಜವನ್ನು ಎತ್ತಿಕಟ್ಟುವ ಕೆಲಸವನ್ನು ಈಗಾಗಲೇ ಕೆಲವರು ಪ್ರಾರಂಬಿಸಿದ್ದಾರೆ ಸಮಸ್ಯೆ ಧರ್ಮದ ನಡುವೆಯಾದರೆ ಸಂಘಟನೆಯನ್ನು ಎತ್ತಿಕಟ್ಟುವ ಮತ್ತು ಸಮಸ್ಯೆ ಧರ್ಮದ ಒಳಗಾದರೆ ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಪ್ರದೀಪನ ಮೃತದೇಹ ಕೊಂಡು ಹೋಗುತ್ತಿದ್ದ ವಾಹನದಲ್ಲಿ ಇದ್ದ ವ್ಯಕ್ತಿ ಆತ್ರಾಡಿಯಲ್ಲಿ ಸೊರಕೆಯವರ ಭಾಷಣ ನಡಿತಿದೆ ದಿಕ್ಕಾರ ಕೂಗೋಣ ಎನ್ನುವ ಅಘಾತಕಾರಿ ಪ್ರಚೋದನೆಯೇ ಸಾಕ್ಷಿಯಾಗಿದೆ ಎಂದರು.
ಪ್ರದೀಪ್ ಪೂಜಾರಿಯವರ ಸಾವಿನ ತಕ್ಷಣ ಕೆಲವು ರಣಹದ್ದುಗಳು ರಣರಂಗಕ್ಕೆ ಇಳಿದಿವೆ ಪ್ರದೀಪನ ಮೇಲೆ ಅತ್ಯಾಚಾರದ ಅರೋಪ ಇದ್ದಾಗ ಅವನು ಕಾಂಗ್ರೆಸ್ ಆಗಿದ್ದ, ಅವನು ಉದಯ್ ಶೆಟ್ಟಿಯವರ ಆಪ್ತ ಆಗಿದ್ದ ಇಡೀ ಸುನೀಲ್ ಕುಮಾರ್ ಆಪ್ತ ಕಾರ್ಕಳದ IT ಸೆಲ್ ಎಲ್ಲಾ ಸದಸ್ಯರು ಅವನ ವಿರುದ್ದ ಅವಹೇಳನ ಪೋಸ್ಟ್ ಹಾಕಿವೆ ಅವನ ತೇಜೋವಧೆ ಮಾಡಿವೆ, ಇನ್ನು ಕೆಲವರು ಅವನಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದಾರೆ ಯಾಕೆಂದರೆ ಅವನು ಬಿಜೆಪಿ ವಿರೋಧಿಯಾಗಿದ್ದ, ಸುನೀಲ್ ಕುಮಾರ್ ವಿರೋದಿಯಾಗಿದ್ದ ಮತ್ತು ನಿರಂತರವಾಗಿ ಸುನೀಲ್ ಕುಮಾರ್ ವಿರೋದಿ ಪೋಸ್ಟ್ ಗಳನ್ನು ಹಾಕುತ್ತಿದ್ದ ಎನ್ನುವ ಕಾರಣಕ್ಕೆ ಮತ್ತು ಆ ಕಾರಣಕ್ಕಾಗಿಯೇ ಪ್ರಕರಣವಾಗಿ ಇಷ್ಟು ದಿನವಾದರೂ ಸುನೀಲ್ ಕುಮಾರ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದೇ ಒಂದು ಶೃದ್ದಾಂಜಲಿ ಪೋಸ್ಟ್ ಇಲ್ಲ, ಆದರೆ ಅವನು ಸತ್ತ ನಂತರ ಇವರಿಗೆಲ್ಲಾ ಹಿಂದೂ ಕಾರ್ಯಕರ್ತ.
ಪ್ರದೀಪನ ಸಾವಿನ ನಂತರ ಕುಂದಾಪುರ ಗಿಳಿಯೊಂದರ ಪಂಚೇದ್ರಿಯಗಳು ಜಾಗೃತವಾಗುತ್ತದೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರದೀಪನ ಕೊಲೆಯನ್ನು ಕಾಂಗ್ರೆಸ್ ನಾಯಕರು ಮಾಡಿಸಿದ್ದಾರೆ ಎಂದು ನಮ್ಮ ನಾಯಕರ ಮೇಲೆ ನೇರ ಆರೋಪ ಮಾಡುತ್ತಾರೆ ಅವರಿಗೆ ಕುಮ್ಮಕ್ಕು ನೀಡುತ್ತಿರುವುದು ಶಾಸಕ ಸುನೀಲ್ ಕುಮಾರ್ ಎಂದು ಆರೋಪಿಸಿದರು
ಪ್ರದೀಪನ ಸಾವಿನಲ್ಲಿ ರಾಜಕೀಯದ ಲಾಭ ಪಡೆಯುವುದೇ ಉದ್ದೇಶ ಆಗಿರುತ್ತದೆ ಕಾರ್ಕಳದಲ್ಲಿ ಯಾವ ವ್ಯಕ್ತಿ ತನ್ನ ಎದುರು ಪ್ರಭಾವಿಯಾಗಿದ್ದಾನೋ ಅವರ ಮೇಲೆ ಕೊಲೆ ಅರೋಪ ಹೊರಿಸುವುದು ಅಂದು ಸುಚೇತಾ ಶೆಟ್ಟಿ ಇಂದು ಪ್ರದೀಪ್ ಪೂಜಾರಿ.
ಇದು ಸುನೀಲ್ ಕುಮಾರ್ ಅವರ ಹಳೆಯ ಚಾಳಿಯಾಗಿದೆ ಎಂದ ಅವರು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ತೆಳ್ಳಾರು ದಿನೇಶ ಪೂಜಾರಿ ಸಾವಿನ ತನಿಖೆಯಾಗಬೇಕು. ಪ್ರದೀಪನ ಸಾವಿನ ಬಗ್ಗೆ ಮಾತನಾಡುವ ಸುನೀಲ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತ ಕಾರ್ಕಳ ತೆಳ್ಳಾರಿನ ದಿನೇಶ್ ಪೂಜಾರಿ ಬಗ್ಗೆ ಮೌನವಾಗಿದ್ದಾರೆ ಯಾಕೆಂದರೆ ದಿನೇಶ್ ಪೂಜಾರಿ ಸಾವಿನ ಮುಂಚಿನ ದಿನ ರಾತ್ರಿ ಮೂರು ಘಂಟೆಗೆ ಶಾಸಕರ ವಿರುದ್ದ ಗಂಬೀರ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡುತ್ತಾನೆ,
ಆ ಆಡಿಯೋದಲ್ಲಿ ಶಾಸಕರ ಕೆಲವು ಖಾಸಗಿ ವಿಚಾರಗಳನ್ನು ಬಹಿರಂಗಪಡಿಸುತ್ತಾನೆ, ಈ ಆಡಿಯೋ ಬೆಳಿಗ್ಗೆ ಎಲ್ಲಾ ಕಡೆ ವೈರಲ್ ಆಗುತ್ತದೆ ಸಂಜೆ ಮೂರು ಘಂಟೆಗೆ ದಿನೇಶ್ ಪೂಜಾರಿ ಸಂಶಯಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ದಿನೇಶ್ ಎಂಬ ದೈರ್ಯದ ವ್ಯಕ್ತಿ ಅತ್ಮಹತ್ತೆ ಮಾಡಲು ಸಾದ್ಯವೇ ಇಲ್ಲ, ಹುಲಿ ವೇಷದ 50 ವರ್ಷದ ಸಂಭ್ರಮವನ್ನು ಎರಡು ದಿನದ ಹಿಂದೆ ಆಚರಿಸಿ ಲಕ್ಷಾಂತರ ರೂ ಗೌರವ ಸಂಪಾದನೆ ಮಾಡಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾದ್ಯವೇ? ಇದು ಸಾರ್ವಜನಿಕರಲ್ಲಿ ಸಂಶಯಕ್ಕೆ ಅವಕಾಶ ಮಾಡಿಕೊಡುತ್ತದೆ ಯಾಕೆಂದರೆ ಆತ ಮಾತನಾಡಿರುವ ಆಡಿಯೋ ಯಾರೆಲ್ಲಾ ಸಾಮಾಜಿಕ ತಾಣದಲ್ಲಿ ಶೇರ್ ಮಾಡುತ್ತಿದ್ದಾರೋ ಅವರೆಲ್ಲರಿಗೂ ಪೋಲೀಸರು ಪೋನ್ ಮಾಡಿ ಡಿಲೀಟ್ ಮಾಡಿಸುತ್ತಿದ್ದಾರೆ ಯಾಕೆ? ಆ ಆಡಿಯೋದಲ್ಲಿ ಅಂತಹ ಗುಟ್ಟಿನ ವಿಚಾರ ಏನಿದೆ ತನಿಖೆಯಾಗಬೇಕಲ್ಲವೇ?
ಯಾಕೆ ಸುನೀಲ್ ಕುಮಾರ್ ತಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸದೆ ಮೌನವಹಿಸಿದ್ದಾರೆ?, ಯಾಕೆ ಬಿಜೆಪಿ IT ಸೆಲ್ ಮೌನವಾಗಿದೆ? ನ್ಯಾಯ ದಿನೇಶ್ ಪೂಜಾರಿಗೂ ಸಿಗಬೇಕಲ್ಲವೇ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ
ಪತ್ರಿಕಾ ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದರ್ಶನ್ ಬಂಗೇರ, ಕಾಂತಾವರ ಉಪಸ್ಥಿತರಿದ್ದರು