ಹಣ ಅಪರಹಣ: ಪೊಲೀಸ್ ಬಂಧನ

ಹಣ ಅಪರಹಣ: ಪೊಲೀಸ್ ಬಂಧನ

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಸತ್ಯನಾರಾಯಣ ಅವರು ತನ್ನ ಮಾಲಕರು ನೀಡಿದ್ದ 1.15 ಕೋಟಿ ರೂ. ತರುತ್ತಿದ್ದಾಗ ಹಣ ಸಹಿತ ಅವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಪೊಲೀಸ್ ಕಾನ್ಸ್‌ಸ್ಟೇಬಲ್‌ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಶ್ರೀಶೈಲ್ ಬಂಧಿತ ಆರೋಪಿ. ಪ್ರಕರಣದ ಇನ್ನೋರ್ವ ಆರೋಪಿ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೊಳಂಕರ್ ಎಂಬಾತನ ಬಂಧನ ಬಾಕಿ ಇದೆ. ಆರೋಪಿಯಾಗಿರುವ ಶ್ರೀಶೈಲನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯ ಕಾಪು ನಿವಾಸಿ ಅಜೀಜ್, ಹಳಿಯಾಳದ ನಸ್ರುಲ್ಲಾಖಾನ್, ಕಾರವಾರದ ನಿತ್ಯಾನಂದ, ಫರಂಗಿಪೇಟೆ ಖಾಲಿದ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article