ಬಸ್ಸು ದರ ದುಪ್ಪಟ್ಟು ಏರಿಕೆ, ಕಾಂಗ್ರೆಸ್ ಸರಕಾರದಿಂದ ಜನರ ಜೀವನಕ್ಕೆ ಬರೆ: ಸತೀಶ್ ಕುಂಪಲ
Wednesday, November 4, 2026
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಿರಂತರವಾಗಿ ಜನರ ಹಣವನ್ನು ಲೂಟಿ ಮಾಡುತ್ತಿದೆ. ದಿನ ಬೆಳಗಾದರೆ ದರ ಏರಿಕೆಯನ್ನು ಮಾಡಿ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚಿಗೆ ಹಾಲಿನ ಬೆಲೆಯನ್ನು ಏಕಾಏಕಿ ಏರಿಕೆ ಮಾಡಿದರೆ ಈಗ ದೀಪಾವಳಿ ಹಬ್ಬಕ್ಕೆ ಬಸ್ಸು ದರವನ್ನು ದುಪ್ಪಟ್ಟು ಜಾಸ್ತಿ ಮಾಡುವ ಮೂಲಕ ಜನರ ಜೀವನದ ಮೇಲೆ ಬರೆ ಎಳೆದಿದೆ. ಇದುವೇ ಡಿ.ಕೆ.ಶಿ. ಸರಕಾರ ಹಬ್ಬಕ್ಕೆ ನೀಡುವ ಉಡುಗೊರೆ ಎಂದು ದಕ್ಷಿಣ ಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಇದು ನಿರ್ದಯ ಸರಕಾರ, ಇಂತಹ ದಿಕ್ಕೆಟ್ಟ ಸರಕಾರ ಗ್ಯಾರಂಟಿ ಕೊಡುತ್ತೇವೆ ಎಂದು ಪೋಸು ಕೊಡುವುದೇ ಹಾಸ್ಯಸ್ಪದ. ಜನರ ದುಡ್ಡನ್ನು ಲೂಟಿ ಮಾಡಿ ಸರಕಾರ ನಡೆಸುವ ಅಧಪತನಕ್ಕೆ ಕಾಂಗ್ರೆಸ್ ಸರಕಾರ ಇಳಿದಿರುವುದು ಶೋಚನೀಯ. ಬಡಜನರ ಶಾಪ ಕಾಂಗ್ರೆಸ್‌ಗೆ ಶೀಘ್ರದಲ್ಲೇ ತಟ್ಟುವುದು ಶತಸಿದ್ದ. ಇಂತಹ ಜನವಿರೋಧಿ ಸರಕಾರ ರಾಜ್ಯದಲ್ಲಿ ತೊಲಗಲೇ ಬೇಕು ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.