ಕರ್ನಾಟಕ ಮಿನಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ
Sunday, November 22, 2026
ಮಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ 14 ವರ್ಷದೊಳಗಿನ ಬಾಲಕರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕ್ರೀಡಾಪಟು ವಿಹಾನ್ ಚಿನ್ನದ ಪದಕ ಸಾಧಿಸುವ ಮೂಲಕ ಮಿನಿ ಒಲಿಂಪಿಕ್ಸ್ನ ಅತ್ಯಂತ ವೇಗದ ಓಟಗಾರ ಅನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಹಾನ್ ಅವರ ಈ ಅಭೂತಪೂರ್ವ ಸಾಧನೆಗೆ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ ಅಲ್ಮೇಡಾ ಎಸ್. ಜೆ. ವಿಹಾನ್ ಸಾಧನೆಯನ್ನು ಶ್ಲಾಘಿಸಿ, ಶುಭ ಹಾರೈಸಿದ್ದಾರೆ.