ಮಂಗಳೂರಿಗೆ ಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಆಗಮನ: ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ಹಲವರ ಎಸ್‌ಐಟಿ ವಿಚಾರಣೆ
ಸೌಜನ್ಯ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೌಜನ್ಯ ಅವರ ತಾಯಿ ಹಾಗೂ ಮಾವನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಸಿದ್ದರು. ಈ ಹಿನ್ನೆಲೆಯಲ್ಲಿ ಚೇತನ್ ಸಿಂಗ್ ರಾಠೋಡ್ ಅವರು ಇಂದು ಸೋಮವಾರ ಮಂಗಳೂರಿನ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದು, ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ ಗೌಡ ಅವರಿಗೆ ಇಂದು ಮಧ್ಯಾಹ್ನ ವಿಚಾರಣೆಗೊಳಪಡಿಸಲಾಗಿದೆ. ಜತೆಗೆ ಸೌಜನ್ಯ ಪ್ರಕರಣದ ದೂರುದಾರ ಹಾಗೂ ಸಾಕ್ಷಿಗಳಾದ ಜಗದೀಶ್ ಗೌಡ, ಪುರಂದರ ಗೌಡ, ವಿಠಲ ಗೌಡ ಎಂಬರನ್ನೂ ವಿಚಾರಣೆಗೊಳಿಸಲಾಗಿದೆ.
ಮಣ್ಣಸಂಕಕ್ಕೆ ಎಸ್‌ಐಟಿ ಮುಖ್ಯಸ್ಥ ಭೇಟಿ
ಧರ್ಮಸ್ಥಳದಿಂದ ಪಾಂಗಾಳ ಅಥವಾ ಮಣ್ಣಸಂಕ ಕಡೆಗೆ ಹೋಗುವ ರಸ್ತೆಯ ಅಂಚಿನಲ್ಲಿರುವ ಕಾಡಿನ ಪ್ರದೇಶಕ್ಕೆ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಸ್ವತಃ ಸೋಮವಾರ ಬೇಡಿ ನೀಡಿ ಸ್ಥಳ ತನಿಖೆ ನಡೆಸಿದರು. ಧರ್ಮಸ್ಥಳ ಗ್ರಾಮದ ಮಣ್ಣಸಂಕ ಎಂಬ ಪ್ರದೇಶದ ಕಾಡಿನಲ್ಲಿ/ನಿರ್ಜನ ಪ್ರದೇಶದಲ್ಲಿ ಸೌಜನ್ಯ ಅವರ ಶವ ಪತ್ತೆಯಾದ ಸ್ಥಳ ಇದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಇತ್ತೀಚೆಗೆ ರಚಿಸಲಾದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಧರ್ಮಸ್ಥಳದ ಮಣ್ಣಸಂಕದ ಬಳಿ ಇರುವ ಈ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಕುಟುಂಬಸ್ಥರ ಸಮ್ಮುಖದಲ್ಲಿ ಸ್ಥಳ ಮಹಜರು ಹಾಗೂ ಘಟನೆಯ ಮರುಸೃಷ್ಟಿ ನಡೆಸಿ ತನಿಖೆಯನ್ನು ಮುಂದುವರೆಸಿದ್ದರು.