ರಾಷ್ಟ್ರಪ್ರೇಮದೊಂದಿಗೆ ಪರಿಸರ ಕಾಳಜಿಯೂ ಅಗತ್ಯ: ಪ್ರೊ. ಜಯವಂತ ನಾಯಕ್
ಅವರು ನ.12 ರಂದು ದೇಶಪ್ರೇಮ, ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಸಂರಕ್ಷಣೆಯ ಆಶಯದೊಂದಿಗೆ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ‘ಏಕ್ ಪೇಡ್ ಮಾ ಕೇ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ) ಅಭಿಯಾನದಡಿ ಎನ್‌ಸಿಸಿ ನೌಕಾದಳದ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಎನ್‌ಸಿಸಿ ನೌಕಾದಳ ಘಟಕದ ಅಧಿಕಾರಿ (ANO) ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ಉಪಸ್ಥಿತರಿದ್ದರು.
ಕಾಲೇಜಿನ ಎನ್‌ಸಿಸಿ ನೌಕಾದಳ ಘಟಕದ ಸುಮಾರು 50 ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿವಿಧ ಜಾತಿಯ ಸಸಿಗಳನ್ನು ನೆಟ್ಟರು. ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಗಿಡ ನೆಡುವ ಈ ಅಭಿಯಾನವು ಭೂಮಿತಾಯಿಯ ಸಂರಕ್ಷಣೆಯ ಮಹತ್ವವನ್ನೂ ಸಾರಿತು. ನೆಟ್ಟ ಸಸಿಗಳನ್ನು ನಿರಂತರವಾಗಿ ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಕೆಡೆಟ್ಗಳು ವಹಿಸಿಕೊಂಡರು. ಯುವಜನತೆಯಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು, ಕಾಲೇಜಿನ ಆವರಣವನ್ನು ಹಸಿರೀಕರಣಗೊಳಿಸುವುದು ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ಪರಿಸರವನ್ನು ಉಳಿಸಿಕೊಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.