ಕಾಂಗ್ರೆಸ್ ನಾಯಕರಿಗೆ ತೇಜಸ್ವಿಸೂರ್ಯ ಪಂಚ ಪ್ರಶ್ನೆ

ಕಾಂಗ್ರೆಸ್ ನಾಯಕರಿಗೆ ತೇಜಸ್ವಿಸೂರ್ಯ ಪಂಚ ಪ್ರಶ್ನೆ

ಮಂಗಳೂರು: ಮಂಗಳೂರಿನಲ್ಲಿ ನ.6 ರಂದು ನಡೆದ ‘ಪ್ರಜಾಪ್ರಭುತ್ವವನ್ನು ಉಳಿಸಿ-ಅರಾಜಕತೆ ಅಳಿಸಿ’  ಘೋಷಣೆಯಡಿ ನಡೆದ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಸಂಸದ ತೇಜಸ್ವಿಸೂರ್ಯ ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆ ಕೇಳಿದ್ದಾರೆ.

ಮೊದಲನೆಯದಾಗಿ ಎಸ್‌ಐಆರ್ ಮೂಲಕವೇ ಬಿಜೆಪಿ ಗೆಲ್ಲುತ್ತಿದೆ ಎಂದಾದರೆ, 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ  ಗೆಲುವು ಸಾಧಿಸಿದ್ದು ಹೇಗೆ? ಆ ಸಂದರ್ಭದಲ್ಲಿ ಎಸ್‌ಐಆರ್ ಪ್ರಕ್ರಿಯೆ ಇರಲಿಲ್ಲವಲ್ಲ. 

ಎರಡನೆಯದಾಗಿ ಜ್ಞಾನೇಶ್ ಕುಮಾರ್ ಅವರು 2025ರ ಫೆಬ್ರವರಿಯಲ್ಲಿ ಚುನಾವಣಾ ಆಯೋಗಕ್ಕೆ ಬಂದು ಮುಖ್ಯ ಚುನಾವಣಾ ಆಯುಕ್ತರಾದರು. ಆದರೆ 2014ರಿಂದ  ಕಾಂಗ್ರೆಸ್ ಸುಮಾರು 95 ಚುನಾವಣೆಗಳಲ್ಲಿ ಸೋತಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶ ಸೇರಿದಂತೆ ಕಾಂಗ್ರೆಸ್‌ನ ಸೋಲುಗಳ ಪೈಕಿ ಬಹುತೇಕ ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಳ್ಳುವ ಮೊದಲೇ ಸಂಭವಿಸಿವೆ. ಹಾಗಾದರೆ ಆ ಸೋಲುಗಳಿಗೆ ಯಾರನ್ನು ಹೊಣೆ ಮಾಡುತ್ತೀರಿ? ಮೂರನೆಯದಾಗಿ ಇವಿಎಂ ಹ್ಯಾಕ್ ಆಗುತ್ತಿದ್ದರೆ ಅದೇ ಇವಿಎಂ ಬಳಸಿ ಚುನಾವಣೆ ನಡೆದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಹೇಗೆ ಗೆಲುವು ಸಾಧಿಸಿತು? ಮಹಾರಾಷ್ಟ್ರದಲ್ಲಿ ಸೋತಾಗ ಮಾತ್ರ ಇವಿಎಂ  ಹ್ಯಾಕ್ ಆಗುತ್ತದೆ, ಕರ್ನಾಟಕದಲ್ಲಿ ಗೆದ್ದಾಗ ಇವಿಎಂ ಸರಿಯಾಗಿರುತ್ತದೆ ಎಂಬ ವಾದಕ್ಕೆ ಏನು ಅರ್ಥವಿದೆ?

ನಾಲ್ಕನೆಯದಾಗಿ ಎಸ್‌ಐಆರ್ ಪ್ರಕ್ರಿಯೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದಾದರೆ, ದೇಶದ ಇತಿಹಾಸದಲ್ಲಿ ಈವರೆಗೆ 12 ಬಾರಿ ಎಸ್‌ಐಆರ್ ನಡೆದಿರುವುದ ನ್ನು ಹೇಗೆ ವಿವರಿಸುತ್ತೀರಿ? ಈ ಪೈಕಿ 11 ಬಾರಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾನೂನುಬದ್ಧವಾಗಿದ್ದ ಪ್ರಕ್ರಿಯೆ, ಬಿಜೆಪಿ ಆಡಳಿತದಲ್ಲಿ ನಡೆದಾಗ ಮಾತ್ರ ಅಸಾಂವಿಧಾನಿಕವಾಗುವುದು ಹೇಗೆ? ಐದನೆಯದಾಗಿ ಇವಿಎಂ, ಜ್ಞಾನೇಶ್ ಕುಮಾರ್ ಮತ್ತು ಎಸ್‌ಐಆರ್‌ನಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂದಾದರೆ ಪಶ್ಚಿಮ ಬಂಗಾಳದಲ್ಲಿ ಕಳೆದ 40 ವರ್ಷಗಳಿಂದಲೂ ಹಾಗೂ ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ಬಿಜೆಪಿ ಏಕೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ? ಒಡಿಶಾದಲ್ಲಿನ ರಾಜಕೀಯ ಬೆಳವಣಿಗೆಗಳಿಗೂ ಇದೇ ಮಾನದಂಡ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article