BREAKING
ದಕ್ಷಿಣ ಕನ್ನಡ

ಮೆಸ್ಕಾಂ: ರಜಾ ದಿನಗಳಲ್ಲೂ ಸೇವೆ ಲಭ್ಯ

ಮಂಗಳೂರು: ಗ್ರಾಹಕರಿಗೆ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾ ದಿನವಾದ ನ.27 (ಕನಕದಾಸ ಜಯಂತಿ), ನ.28 (ನಾಲ್ಕನೇ ಶನಿವಾರ) ಹಾಗೂ ನ.29 (ಆದಿತ್ಯವಾರ) ರಂದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮೆಸ್ಕಾಂನ ಎಲ್ಲಾ ನಗದು ಕೌಂಟರ್‌ಗಳನ್ನು ತೆರೆದಿಡಲು ಕ್ರಮ ಕೈಗೊಳ್ಳಲಾಗಿದೆ.

ಆದುದರಿಂದ ಗ್ರಾಹಕರು ಸೌಲಭ್ಯದ ಸದುಪಯೋಗ ಪಡಿಸಿಕೊಂಡು ವಿದ್ಯುತ್ ಬಿಲ್‌ಗಳನ್ನು ಪಾವತಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

📢 ಡೈಲಿ ಪಲ್ಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!