17ನೇ ವರ್ಷದ ಪಣಪಿಲ ಕಂಬಳಕ್ಕೆ ಚಾಲನೆ: ಈ ಬಾರಿ ಹಿರಿಯ ವಿಭಾಗದ ಕೋಣಗಳಿಗೂ ಅವಕಾಶ

17ನೇ ವರ್ಷದ ಪಣಪಿಲ ಕಂಬಳಕ್ಕೆ ಚಾಲನೆ: ಈ ಬಾರಿ ಹಿರಿಯ ವಿಭಾಗದ ಕೋಣಗಳಿಗೂ ಅವಕಾಶ


ಮೂಡಬಿದಿರೆ: 17ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳ ಸಮಿತಿ ಪಣಪಿಲ ಇವರ ನೇತೃತ್ವದಲ್ಲಿ 17ನೇ ವಷ೯ದ "ಜಯ ವಿಜಯ" ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಿಗ್ಗೆ ಕಂಬಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 


ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ ಮುರಳಿ ಕೃಷ್ಣ ಭಟ್ ಅವರು ಕಂಬಳದ ಕರೆಗೆ ಪ್ರಸಾದ ಪ್ರೋಕ್ಷಿಸಿ  ಪೂಜೆ ಸಲ್ಲಿಸಿದರು. ಪಣಪಿಲ ಅರಮನೆಯ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ ಅವರು ಕಂಬಳವನ್ನು   ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಹೇಮಾ ಸಭಾ ಭವನದ ಹೇಮಾ ಕೆ ಪೂಜಾರಿ, ಹನ್ನೇರು ಕೃಷ್ಣಮ್ಮ ಜೆ.ಕೋಟ್ಯಾನ್, ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ವಕೀಲರಾದ ಶಾಂತಿ ಪ್ರಸಾದ್ ಹೆಗ್ಡೆ, ಮೂಡುಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪ್ರವೀಣ್ ಭಟ್ ಕಾನಂಗಿ, ಪಣಪಿಲ ಕಂಬಳ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯಾಧ್ಯಕ್ಷರಾದ ಸುಭಾಸ್ ಚಂದ್ರ ಚೌಟ, ಪ್ರಧಾನ ಕಾರ್ಯದರ್ಶಿ ಅಶ್ವಥ್ ಪಣಪಿಲ ಸೇರಿದಂತೆ ಇತರ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಈ ಹಿಂದೆ ನಡೆದ ಕಂಬಳಗಳಲ್ಲಿ ಕಿರಿಯ ವಿಭಾಗದ ಕೋಣಗಳು ಮಾತ್ರ ಸ್ಪಧಿ೯ಸುತ್ತಿದ್ದವು ಈ ಬಾರಿ ಹಿರಿಯ ವಿಭಾಗದ ಕೋಣಗಳು ಸ್ಪಧೆ೯ಯಲ್ಲಿ ಭಾಗವಹಿಸುತ್ತಿವೆ. 

ಬಿಜೆಪಿ ಮುಖಂಡೆ ವಂದನಾ ಪ್ರಭು ರವರು ವಂದೇ ಮಾತರಂ ರಾಷ್ಟ್ರಗೀತೆಯನ್ನು ಹಾಡಿದರು. ಸುನಿಲ್ ಪಣಪಿಲ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article