ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ
Friday, November 6, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನಿಕಟಪೂರ್ವ ವಕ್ತಾರ, ಮಾಜಿ ಕಾರ್ಪೊರೇಟರ್ ಆಗಿದ್ದ ರಾಧಾಕೃಷ್ಣ ಅವರು ಭಾರತೀಯ ಜನತಾ ಪಾರ್ಟಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಪತ್ರದಲ್ಲಿ 2019ರಲ್ಲಿ ನಳಿನ್ ಕುಮಾರ್ ಸಂಸದರಾಗಿದ್ದ ಸಂದರ್ಭ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದೆ. ಪಕ್ಷದ ಎಲ್ಲರೂ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ತನ್ನ ವೈಯಕ್ತಿಕ ಕಾರಣಗಳಿಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ರಾಧಾಕೃಷ್ಣ ಅವರು ಪಾಲಿಕೆಯಿಂದ ನೇಮಕಗೊಂಡ ಮುಡಾ ಸದಸ್ಯರು, ಕಾರ್ಪೊರೇಟರ್ ಆಗಿ, ನಾಮನಿರ್ದೇಶಿತ ಕಾರ್ಪೊರೇಟರಾಗಿ, ಬಿಜೆಪಿ ವಕ್ತಾರ ಹುದ್ದೆಯನ್ನು ನಿರ್ವಹಿಸಿದ್ದರು.