ಸುರತ್ಕಲ್‌ನಲ್ಲಿ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ನೇತೃತ್ವದ ತಂಡ ದಾಳಿ
Friday, November 6, 2026
ಮಂಗಳೂರು: ಕ್ಲೌಡ್ ಕಿಚನ್ ಮತ್ತು ಸೆಂಟ್ರಲ್ ಕೇಕ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್‌ಗಳಿಂದ ಕೇಕ್ ಮತ್ತು ಐಸ್‌ಕ್ರೀಮ್‌ಗಳನ್ನು ಸರಬರಾಜು ಮಾಡಿ ಮಾರಾಟ ಮಾಡುತ್ತಿರುವ ಸುರತ್ಕಲ್ ಪರಿಸರದ ರಿಬ್ಬನ್ಸ್ ಆಂಡ್ ಬಲೂನ್ಸ್, ಜಿಛಿ ಫ್ರಾನ್ಚೈಸಿ ಯೂನಿಟ್‌ಗಳಿಗೆ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿದೆ.
ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್‌ರ ಸೂಚನೆಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕೇಕ್‌ಗಳಲ್ಲಿ ಬಳಸಲಾಗುತ್ತಿರುವ ಕಲರ್‌ಗಳ ಬಗ್ಗೆ ಪ್ರಯೋಗಾಲಗಳಲ್ಲಿ ಪರೀಕ್ಷೆ ನಡೆಸಲು ಮಾದರಿಗಳನ್ನು ಸಂಗ್ರಹಿಸಿದರು. ಕೇಕ್‌ಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ಹಾನಿಕರಕವಾದ ಬಣ್ಣಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
ಹಬ್ಬದ ಸಂದರ್ಭ ತಯಾರಿಸಲಾಗುವ ಸಿಹಿ ತಿಂಡಿಗಳಲ್ಲಿ ಕಲರ್ ಬಳಸದಂತೆ ಗುಣಮಟ್ಟದ ಶುಚಿಯಾದ ರೀತಿಯಲ್ಲಿ ತಯಾರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಹೋಟೆಲ್‌ಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಿ ಕಿಚನ್ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು. ಆಹಾರ ತಯಾರಿಸಲು ಬಳಸುವ ಸಾಮಗ್ರಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಹೋಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.