ಸಿ.ಎ. ಫೌಂಡೇಶನ್ ಪರೀಕ್ಷೆ: ಆಳ್ವಾಸ್ನ 20 ವಿದ್ಯಾರ್ಥಿಗಳು ಉತ್ತೀರ್ಣ
ಈ ಪರೀಕ್ಷೆಯಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 18.93ರಷ್ಟಿದ್ದರೆ, ಆಳ್ವಾಸ್ ಸಂಸ್ಥೆಯು ಶೇಕಡಾ 31.75ರಷ್ಟು ಫಲಿತಾಂಶ ದಾಖಲಿಸಿದೆ.
ಸೆಪ್ಟೆಂಬರ್ನಲ್ಲಿ ನಡೆದ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುವಿತ್ ಭಂಡಾರಿ, ವಿಕಾಸ್ ಶೆಟ್ಟಿ, ಸೂರಜ್ ಮಾಹಾಂತೇಶ್, ಸುಪ್ರೀತಾ, ಸುದೀಕ್ಷಾ, ತನುಷ್ ಜಿ. ಶೆಟ್ಟಿ, ನಂದನ್ ಪಿ. ನಾಯಕ್, ವೆಂಕಟೇಶ್ ಪ್ರಭು, ತನ್ವಿ ವಿಜಯ್ ಕೋಟ್ಯಾನ್, ವೆನಿಸ್ಸಾ, ಶ್ರೇಯಾ ಎಸ್. ಶೆಟ್ಟಿ, ವೈಷ್ಣವಿ, ಪ್ರಥಮ್ ನಾಯಕ್, ಶ್ರಾವ್ಯ, ಶಾಶ್ವತ್, ಪ್ರಗತಿ, ಪ್ರೀತಮ್, ಆಯೇಷಾ ಆನಮ್, ಸಾಹಿತ್ಯಾ ಕುಶಲ್ ಹಾಗೂ ವರುಣ್ ಕುಮಾರ್ ಉತ್ತೀರ್ಣರಾಗಿದ್ದಾರೆ.
ಮೇ 2026ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ವಾಣಿಜ್ಯ ವಿಭಾಗದ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇದೀಗ ಸೆಪ್ಟೆಂಬರ್ ಪರೀಕ್ಷೆಯಲ್ಲಿ 20 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಮೇ ಮತ್ತು ಸೆಪ್ಟೆಂಬರ್ ತಿಂಗಳ ಪರೀಕ್ಷೆಗಳಲ್ಲಿ ಒಟ್ಟು 61 ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.