7ನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ ಮತ್ತು ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ

7ನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ ಮತ್ತು ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ


ಮೂಡುಬಿದಿರೆ: 7ನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ ಮತ್ತು ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ಸಾವಿರ ಕಂಬ ಬಸದಿ ಮುಂಭಾಗ ಬುಧವಾರ ನಡೆಯಿತು. 

ಜೈನ ಮಠದ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿ  ಅವರು ದೀಪ ಬೆಳಗಿಸಿ ಸಸಿನೆಟ್ಟು  ಗಂಟೆಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ  ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ತ್ವಿಕ ಅರೋಗ್ಯ ದಾಯಿಕ ಆಹಾರ. ಅಹಿಂಸೆ, ಕರುಣೆ, ದಯೆ, ಧ್ಯಾನಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ ಅರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ನುಡಿದರು. 

ಡಾ.ಸುಭಾಷ್ ಪತ್ರಿಜೀ ಅವರ ಪ್ರೇರಣೆಯಂತೆ ಪಿರಮಿಡ್ ಸ್ಪಿರಿಚುವಲ್ ಮೂಮೆoಟ್ ಕರ್ನಾಟಕ ಹಾಗೂ ಮೂಡುಬಿದಿರೆ ಶಾಖೆ ವತಿಯಿಂದ ಮೂರು ದಿನಗಳ ಕಾರ್ಯಕ್ರಮದಲ್ಲಿ ಕೊನೆ ದಿನದ ಕಾರ್ಯಕ್ರಮ ಜೈನ ಕಾಶಿ ಮೂಡುಬಿದಿರೆ ಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಚೌಟರ ಅರಮನೆಯ ಕುಲದೀಪ ಎಂ., ಕೃಷ್ಣಪ್ಪ ರಾಮ ನಗರ, ವ್ರಷಭ ಮುತ್ತಿನ ಹುಬ್ಬಳ್ಳಿ, ಸುದರ್ಶನ್ ಮೂಡುಬಿದಿರೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮೂಡುಬಿದಿರೆ ಘಟಕದ ಭಾರತಿ ಶೆಟ್ಟಿ  ಸ್ವಾಗತಿಸಿದರು. ಡಾ.ಸುಮಂಗಳ ಸಾಲಿಮಠ ಸಂಸ್ಥಾಪಕರಾದ ಪತ್ರೀಜಿ ವೇಜಿಟೇರಿಯನ್ ಮೂ ಮೆಂಟ್  ಪ್ರಸ್ತಾವನೆಗೈದು  ಉದ್ದೇಶಗಳನ್ನು ತಿಳಿದರು.

ಆ ನಂತರ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು 300 ಜನ ಜಾಥಾ ಮೂಲಕ ಎಕ್ಸಲೆಂಟ್ ಕಾಲೇಜು ಕಡೆ 'ಅಹಿಂಸಾ ಪರಮೋ ಧರ್ಮ', 'ದಯೆ ಯೆ ಧರ್ಮದ ಮೂಲ ವಯ್ಯಾ' ಎಂಬ ವಿವಿಧ ಧರ್ಮಗಳ ಅಹಿಂಸಾ ಸಸ್ಯಾಹಾರಿ ಘೋಷ ವಾಕ್ಯ ಗಳನ್ನು ಹೇಳುತ್ತಾ ಜಯ ಘೋಷ ದೊಂದಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article