ಸಾವಿರ ಕಂಬ ಬಸದಿಗೆ ಭೇಟಿ ನೀಡಿದ ಆಕಾಶವಾಣಿ ಆಲ್ ಇಂಡಿಯಾ ರೇಡಿಯೋದ ಡೈರೆಕ್ಟರ್ ಜನರಲ್ ರಾಜೀವ್ ಕುಮಾರ್ ಜೈನ್ ಹಾಗೂ ಆಕಾಶವಾಣಿ ಡೆಪ್ಯೂಟಿ ಜನರಲ್ ಸಂಜೀವ್

ಸಾವಿರ ಕಂಬ ಬಸದಿಗೆ ಭೇಟಿ ನೀಡಿದ ಆಕಾಶವಾಣಿ ಆಲ್ ಇಂಡಿಯಾ ರೇಡಿಯೋದ ಡೈರೆಕ್ಟರ್ ಜನರಲ್ ರಾಜೀವ್ ಕುಮಾರ್ ಜೈನ್ ಹಾಗೂ ಆಕಾಶವಾಣಿ ಡೆಪ್ಯೂಟಿ ಜನರಲ್ ಸಂಜೀವ್


ಮೂಡುಬಿದಿರೆ: ಆಕಾಶವಾಣಿ ಆಲ್ ಇಂಡಿಯಾ ರೇಡಿಯೋದ ಡೈರೆಕ್ಟರ್ ಜನರಲ್ ರಾಜೀವ್ ಕುಮಾರ್ ಜೈನ್ ಹಾಗೂ ಆಕಾಶವಾಣಿ ಡೆಪ್ಯೂಟಿ ಜನರಲ್ ಸಂಜೀವ್ ಅವರು ಶುಕ್ರವಾರ ಶ್ರೀ ಕ್ಷೇತ್ರ ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಜೈನಕಾಶಿಯ ಸಾವಿರ ಕಂಬ ಬಸದಿ ಹಾಗೂ ಶ್ರೀ ದಿಗಂಬರ ಜೈನ ಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಧವಳತ್ರಯ ಗ್ರಂಥ, ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಕುಷ್ಮಾಂಡಿನಿ ದೇವಿಯ ದರ್ಶನ ಪಡೆದರು. ಬಳಿಕ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ  ಪಂಡಿತಾಚಾರ್ಯವರ್ಯ ಸ್ವಾಮೀಜಿಯನ್ನು ಭೇಟಿ ಮಾಡಿ ಕ್ಷೇತ್ರದ ಕುರಿತು ಮಾಹಿತಿ ಪಡೆದುಕೊಂಡರು.

ಲತೇಶ್, ಲತಾ ಸುರೇಶ್ ಹಾಗೂ ಆಕಾಶವಾಣಿ ಮಂಗಳೂರು ಸಿಬ್ಬಂದಿ  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article