ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ
Friday, November 13, 2026
ಮೂಡುಬಿದಿರೆ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ ನಡೆಯಿತು.
ಸಂಗಬೆಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ರೋಹಿಣಿ ಶೆಟ್ಟಿ ಅವರು ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಂಬಿಕೆಯ ಅರ್ಹ ಗ್ರಾಹಕರು ಸೊಸೈಟಿಯಲ್ಲಿ ತಮ್ಮ ವ್ಯವಹಾರ ಮಾಡಿದ್ದಲ್ಲಿ, ಸೊಸೈಟಿಯು ತನ್ನಿಂದ ತಾನೇ ಅಭಿವೃದ್ಧಿಯಾಗುತ್ತದೆ. ಸೊಸೈಟಿಯ ಸಿಬ್ಬಂದಿಗಳು ಕೂಡ ಆತ್ಮೀಯ ರೀತಿಯಲ್ಲಿ ಸೇವೆ ನೀಡಿದ್ದಲ್ಲಿ ಬಹಳಷ್ಟು ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಜನತಾ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆಯ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟೋಫರ್ ಮ್ಯಾಕ್ಸಿಮ್ ಡಿಸೋಜ ರವರು ಸಾಂದರ್ಭಿಕವಾಗಿ ಮಾತನಾಡಿದರು.
ಮೂಡುಬಿದಿರೆ ಶಾಖಾ ಪ್ರಬಂಧಕರಾದ ಅಭಿಷ್ಟಾ ಜೈನ್ ಅವರು ಸ್ವಾಗತಿಸಿದರು. ವಿನಿತಾ ವಿಲ್ಮಾ ಡಿಸೋಜ ವಂದಿಸಿದರು.