ಹಳೆಯಂಗಡಿಯ ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ 'ಸಹಕಾರ ರತ್ನ’ ಪುರಸ್ಕಾರಕ್ಕೆ ಆಯ್ಕೆ

ಹಳೆಯಂಗಡಿಯ ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ 'ಸಹಕಾರ ರತ್ನ’ ಪುರಸ್ಕಾರಕ್ಕೆ ಆಯ್ಕೆ


ಮೂಡುಬಿದಿರೆ: ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ ಸಹಕಾರ ರತ್ನ’ ಪುರಸ್ಕಾರಕ್ಕೆ ಹಳೆಯಂಗಡಿಯ ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಅವರು ಆಯ್ಕೆಯಾಗಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ಸುಮಾರು 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ,ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2021 ರಲ್ಲಿ ಸ್ಥಾಪನೆಗೊಂಡ ಅವರ ಅಧ್ಯಕ್ಷತೆಯ ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಇದೀಗ ಅಲ್ಪಾವಧಿಯಲ್ಲೇ ಉಭಯ ಜಿಲ್ಲೆಯ ಪ್ರಗತಿಪರ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ.

ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆರ್ನಾಡ್ ಅವರಿಗೆ ‘ ಸಹಕಾರ ರತ್ನ’ ಪುರಸ್ಕಾರ ಲಭಿಸಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article