ಮೂಡುಬಿದಿರೆಯಿಂದ ವಿವಾಹಿತ ಮಹಿಳೆ ನಾಪತ್ತೆ

ಮೂಡುಬಿದಿರೆಯಿಂದ ವಿವಾಹಿತ ಮಹಿಳೆ ನಾಪತ್ತೆ


ಮೂಡುಬಿದಿರೆ: ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿವಾಹಿತ ಮಹಿಳೆಯೋವ೯ರು ಕೆಲಸ ಮುಗಿಸಿ ಮನೆಗೆ ತೆರಳದೆ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೂಲತಃ ಗದಗದವರಾಗಿರುವ, ಇದೀಗ ಮಾರ್ಪಾಡಿ ಗ್ರಾಮದ ಕಡದಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಭುವನೇಶ್ವರಿ (28) ನಾಪತ್ತೆಯಾಗಿರುವ ಮಹಿಳೆ. 

ಭುವನೇಶ್ವರಿ ಅವರು ಮೂಡುಬಿದಿರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನ. 10ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಪತಿಯು ಪತ್ನಿಯನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಹೋಗಿದ್ದರು. ಪ್ರತಿದಿನ ಸಂಜೆ 6:30ಕ್ಕೆ ಮನೆಗೆ ಮರಳುತ್ತಿದ್ದ ಭುವನೇಶ್ವರಿ ಅವರು, ಅಂದು ರಾತ್ರಿ 8:00 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗದ ಕಾರಣ ಪತ್ತೆ ಮಾಡಿಕೊಡುವಂತೆ ಭುವನೇಶ್ವರಿ ಅವರ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

ಕಾಣೆಯಾದವರ ಚಹರೆ ಮತ್ತು ವಿವರಗಳು:

• ಹೆಸರು: ಭುವನೇಶ್ವರಿ

• ವಯಸ್ಸು: 28 ವರ್ಷ

• ಎತ್ತರ: 4.5 ಅಡಿ

• ಬಣ್ಣ ಮತ್ತು ಮುಖ: ಎಣ್ಣೆ ಕಪ್ಪು ಮೈಬಣ್ಣ, ಉರುಟು ಮುಖ

• ಕೂದಲು: ಗುಂಗುರು ಕೂದಲು

• ಮೈಕಟ್ಟು: ಸಪೂರ ಶರೀರ

• ಮಾತನಾಡುವ ಭಾಷೆ: ಕನ್ನಡ

• ಧರಿಸಿದ್ದ ಬಟ್ಟೆ: ಕುಂಕುಮ ಬಣ್ಣದ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶಾಲು ಧರಿಸಿದ್ದು, ಸಣ್ಣ ಸ್ಕೂಲ್ ಬ್ಯಾಗ್ ಹೊಂದಿದ್ದರು.

ಈ ಮಹಿಳೆಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ತಕ್ಷಣ ಮಾಹಿತಿ ನೀಡುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ:

• ಮೂಡುಬಿದಿರೆ ಪೊಲೀಸ್ ಠಾಣೆ: 08258-236333

• ಪೊಲೀಸ್ ಆಯುಕ್ತರ ಕಚೇರಿ (ಮಂಗಳೂರು): 0824-2220801, 2220800

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article