ಬಿಜೆಪಿಯಿಂದ ಕಿನ್ನಿಗೋಳಿಯಲ್ಲಿ ಹಕ್ಕೋತ್ತಾಯ ಪ್ರತಿಭಟನೆ

ಬಿಜೆಪಿಯಿಂದ ಕಿನ್ನಿಗೋಳಿಯಲ್ಲಿ ಹಕ್ಕೋತ್ತಾಯ ಪ್ರತಿಭಟನೆ


ಮೂಡುಬಿದಿರೆ: ಬಿಜೆಪಿ ಮುಲ್ಕಿ-ಮೂಡಬಿದಿರೆ ಮಂಡಲದ ನೇತೃತ್ವದಲ್ಲಿ  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ಗುರುವಾರ ಹಕ್ಕೋತ್ತಾಯ ಪ್ರತಿಭಟನೆ ನಡೆಯಿತು. 

ರಾಜ್ಯ ಸರಕಾರದ ಜನವಿರೋಧಿ ಆಡಳಿತ ನೀತಿಗಳು, ಭ್ರಷ್ಟಾಚಾರ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಜನರ ಧ್ವನಿಯಾಗಿ 'ನಮ್ಮ ಹಕ್ಕು – ನಮ್ಮ ನಡಿಗೆ' ಎಂಬ ಶೀಷಿ೯ಕೆಯೊಂದಿಗೆ ನಡೆದ ಬೃಹತ್ ಪಾದಯಾತ್ರೆಯಲ್ಲಿ  ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ಆಳ್ವ, ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಕಿನ್ನಿಗೋಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ  ಅಭಿಲಾಷ್ ಶೆಟ್ಟಿ ಕಟೀಲು, ಜಿಲ್ಲಾ ಮುಖಂಡ ವಿಕಾಸ್ ಕುಮಾರ್ ಪುತ್ತೂರು, ಜಿಲ್ಲಾ ಮಾಧ್ಯಮ ಪ್ರಮುಖ್ ವಸಂತ್ ಅಮೀನ್, ಪ್ರತಿಭಟನೆಯ ಉಸ್ತುವಾರಿ ಈಶ್ವರ್ ಕಟೀಲು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಗುರುರಾಜ್ ಮಲ್ಲಿಗೆ ಅಂಗಡಿ, ಪ್ರಮುಖರಾದ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಶಕ್ತಿ ಕೇಂದ್ರದ ಪ್ರಮುಖರು, ಕಾಯ೯ಕತ೯ರು, ಸಾವ೯ಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article