ಕಾಶಿಪಟ್ಣ ಸರಕಾರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ
Thursday, November 5, 2026
ಮೂಡುಬಿದಿರೆ: ಬೆಳ್ತಂಗಡಿ ತಾಲೂಕಿನ ಕೇಳ-ಕಾಶಿಪಟ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಹಿರಿಯ ಪತ್ರಕರ್ತ ರಾಯಿ ರಾಜಕುಮಾರ ಗುರುವಾರ ನೀಡಿದರು.
ವಿದ್ಯಾರ್ಥಿಗಳಿಗೆ ಗ್ರಾಮೀಣ ಶಾಲೆ, ಕಾಲೇಜುಗಳಲ್ಲಿಯೇ ಕಲಿಯುವುದರಿಂದ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಸಂದರ್ಭದಲ್ಲಿ ದೊರಕುವ ಕೃಪಾಂಕ, ಕನ್ನಡ ಮಾಧ್ಯಮದ, ಸರಕಾರಿ ಶಾಲೆಗಳಿಂದ ದೊರಕುವ ಪ್ರಯೋಜನಗಳ ಸಮಗ್ರ ಮಾಹಿತಿಯನ್ನು ನೀಡಿದರು.
ಶಿಕ್ಷಕಿ ವಸುಧಾ ಸ್ವಾಗತಿಸಿದರು. ಪ್ರತಿಮಾ, ವಿನಿತಾ ಮರಿಯಾ, ಪ್ರಿಯಾ ಕಾರ್ಯಕ್ರಮ ಸಂಘಟಿಸಿದ್ದರು. ಚೇತನ್ ಪಾಂಡರರ್ ವಂದಿಸಿದರು.