ಪುತ್ತಿಗೆ ಶಾಲೆಯಲ್ಲಿ ಹಂಡೇಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
Thursday, November 5, 2026
ಮೂಡುಬಿದಿರೆ: ಪುತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 4ರಂದು ಹಂಡೇಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಮೂಡುಬಿದಿರೆ ವಲಯ ಹಾಗೂ ಪುತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಶಾಲಾ ದಾನಿ ವಾಸುದೇವ್ ನಾಯಕ್ ಉದ್ಘಾಟಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಾಧು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮ ನಾಯ್ಕ್, ವಾದಿರಾಜ್ ಮಡ್ಮಣ್ಣಯ, ವಿದ್ಯಾ ರಮೇಶ್ ಭಟ್, ಶಿಕ್ಷಣ ಸಂಯೋಜಕ ರಾಜೇಶ್ ಭಟ್, ದಾನಿ ಪ್ರೇಮ ಶೆಟ್ಟಿ, ವಾಣಿಶ್ರೀ, ಶೀನ ನಾಯ್ಕ್, ಧರ್ಮಸ್ಥಳ ಯೋಜನಾಧಿಕಾರಿ ಚಂದ್ರಹಾಸ್, ಶಿಕ್ಷಕ ಸಂಘದ ಅಧ್ಯಕ್ಷೆ ಮಹೇಶ್ವರಿ ಹಾಗೂ ರಾಮಕೃಷ್ಣ ಶಿರೂರು ಭಾಗವಹಿಸಿದ್ದರು.
ನಾಗರತ್ನ ಶಿರೂರು ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಜೋಸೆಫ್ ಮೊಂತೆರೊ ಸ್ವಾಗತಿಸಿದರು. ಶಿಕ್ಷಕಿ ಮಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ವೇಗಸ್ ವಂದಿಸಿದರು.
ಶಾಲಾ ಶಿಕ್ಷಕಿಯರಾದ ಜ್ಯೋತಿ, ಮಮತಾ, ಪ್ರತಿಭಾ, ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.