ಉದ್ಯಮಿ ಕೆ. ಜಯವರ್ಮ ರಾಜ್ ಬಲ್ಲಾಳರ ಉತ್ತಮ ವ್ಯಕ್ತಿತ್ವಕ್ಕೆ ಸಂದ ಗೌರವ 'ಕಲ್ಪವೃಕ್ಷ ಪ್ರಶಸ್ತಿ': ಯು.ಟಿ. ಖಾದರ್
ಎಂಸಿಎಸ್ ಸೊಸೈಟಿಯಲ್ಲಿ ಸಹಕಾರ ಸಪ್ತಾಹ ಸಂಭ್ರಮ
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿ, ಅವಿಭಜಿತ ಜಿಲ್ಲೆಗಳಲ್ಲಿ ಕಳೆದ 25 ವಷ೯ಗಳಿಂದ ಗ್ರಾಹಕರಿಗೆ 25% ಡಿವಿಡೆಂಟ್ ನೀಡುವ ಸಂಸ್ಥೆಯಿದ್ದರೆ ಅದು ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್. ಅವರ ಸಹಕಾರ ಮನೋಭಾವವನ್ನು ಗುರುತಿಸಿಲಾಗಿದ್ದು ಮಂಗಳೂರಿನಲ್ಲಿ ನಡೆಯುವ ಸಹಕಾರಿ ಸಪ್ತಾಹದಲ್ಲಿ ಗುರುತಿಸಿ ಗೌರವಿಸಲಾಗುವುದು ಎಂದರು.
ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚೌಟರ ಅರಮನೆಯ ಕುಲದೀಪ್ ಎಂ., ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಎಂ.ಗಣೇಶ್ ನಾಯಕ್, ಮನೋಜ್ ಕುಮಾರ್ ಶೆಟ್ಟಿ, ಎಂ. ಪದ್ಮನಾಭ, ಸಿ. ಎಚ್ ಗಫೂರ್, ಜಯರಾಮ್ ಕೋಟ್ಯಾನ್, ಎಂ. ಪಿ ಅಶೋಕ್ ಕಾಮತ್, ಅನಿತಾ ಶೆಟ್ಟಿ ಉಪಸ್ಥಿತರಿದ್ದರು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅಭಿನಂದನಾ ಭಾಷಣಗೈದರು.
ಹೆರಾಲ್ಡ್ ತಾವ್ರೋ ಪ್ರಾಥಿ೯ಸಿದರು. ಚೇತನಾ ರಾಜೇಂದ್ರ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಮುಖ್ಯ ನಿರ್ವಹಣಾಧಿಕಾರಿ ಸುದರ್ಶನ್ ಭಟ್ ವಂದಿಸಿದರು.
ಸಭಾ ಕಾಯ೯ಕ್ರಮದ ನಂತರ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾಥಿ೯ಗಳಿಂದ 'ವಿಧಿ ವಿಪಯಾ೯ಸ' ಯಕ್ಷಗಾನ ಪ್ರಸ್ತುತಗೊಂಡಿತು.

