ಇರ್ವತ್ತೂರು ಉಮಾನಾಥ ಶೆಣೈ ನಿಧನ
Sunday, November 8, 2026
ಮೂಡುಬಿದಿರೆ: ಇರ್ವತ್ತೂರಿನ ಹೋಟೆಲ್ ಉದ್ಯಮಿ, ವರ್ತಕ ಐ ಉಮಾನಾಥ ಶೆಣೈ (81ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನ ಹೊಂದಿದರು.
ಇರ್ವತ್ತೂರು ಗ್ರಾಮಾಂತರ ಪರಿಸರದಲ್ಲಿ ತನ್ನ ತಂದೆಯವರು ಹೋಟೆಲ್ ಉದ್ಯಮವನ್ನು ಐದು ದಶಕಗಳ ಕಾಲ ಮುನ್ನಡೆಸಿಕೊಂಡು ಬಂದಿದ್ದ ಅವರು ನಂತರ ದಿನಸಿ ವರ್ತಕರಾಗಿಯೂ ಗುರುತಿಸಿಕೊಂಡಿದ್ದರು.
ಅವರು ಜ್ಯೋತಿಷಿ, ವಾಸ್ತು ತಜ್ಞ ಐ ಮೋಹನ ದಾಸ ಶೆಣೈ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.