ಬಿಜೆಪಿ ಯುವಮೋಚಾ೯ ಮತ್ತು ರೈತ ಮೋಚಾ೯ದಿಂದ ಗೋ-ಪೂಜೆ
Tuesday, November 10, 2026
ಮೂಡುಬಿದಿರೆ: ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಯುವಮೋರ್ಚಾ ಹಾಗೂ ರೈತ ಮೋರ್ಚಾ ಇವುಗಳ ಸಹಬಾಗಿತ್ವದಲ್ಲಿ ಮೂಡುಬಿದಿರೆಯ ರೈತ ಮೋರ್ಚಾ ಸದಸ್ಯರಾದ ಆಶಾ ದಿನೇಶ್ ಅವರ ಮನೆಯಲ್ಲಿ ಗೋ- ಪೂಜೆ ನಡೆಯಿತು.
ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್, ಬಿಜೆಪಿ ರೈತ ಮೋಚಾ೯ದ ಜಿಲ್ಲಾ ಪ್ರ. ಕಾರ್ಯದರ್ಶಿ ನಾಗರಾಜ್ ಪೂಜಾರಿ ಒಂಟಿಕಟ್ಟೆ, ರೈತಮೋರ್ಚಾ ದ.ಕ. ಜಿಲ್ಲೆ ಕಾರ್ಯಾಲಯ ಕಾರ್ಯದರ್ಶಿ ಕಾರ್ತಿಕ್ ಪಟ್ಲ, ಬಿಜೆಪಿ ಮೂಡುಬಿದಿರೆ ನಗರ ಕಾರ್ಯದರ್ಶಿ ಯಶವಂತ್ ಮಾಸ್ತಿಕಟ್ಟೆ, ಒಬಿಸಿ ಮೋರ್ಚಾದ ಪ್ರ. ಕಾರ್ಯದರ್ಶಿ ಸಂಪತ್ ನೆತ್ತೋಡಿ, ಯುವಮೋರ್ಚಾದ ಕಾರ್ಯದರ್ಶಿಗಳಾದ ಗೌತಮ್ ರೈ, ರೋಷನ್ ಬೆಳುವಾಯಿ, ಯುವಮೋರ್ಚಾ ಸದಸ್ಯರಾದ ಡಿಶಾಂತ್ ಮೂಡುಬಿದಿರೆ, ಪುನೀತ್ ಕೇಮಾರ್ ಉಪಸ್ಥಿತರಿದ್ದರು.
ಯುವಮೋರ್ಚಾ ಪ್ರ. ಕಾರ್ಯದರ್ಶಿ ಭರತ್ ಶೆಟ್ಟಿ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.