ಸಂತ ಫಿಲೋಮಿನಾ ಕಾಲೇಜಿನಲ್ಲಿ ಹಿಂದಿ ಭಾಷಣ ಸ್ಪರ್ಧೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಹಿಂದಿ ಭಾಷಣ ಸ್ಪರ್ಧೆ

ಡಿಜಿಟಲ್ ಯುಗದಲ್ಲಿ ಮಾನಸಿಕ ಶಾಂತಿ ಕಾಪಾಡಲು ಪ್ರಾಂಶುಪಾಲರ ಕರೆ


ಪುತ್ತೂರು: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ, ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಹಿಂದಿ ವಿಭಾಗ, ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಪರ್ಫಾರ್ಮಿಂಗ್ ಆರ್ಟ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಾಲೇಜಿನ ಸ್ನಾತಕೋತ್ತರ ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ‘ಸಾಮಾಜಿಕ ಮಾಧ್ಯಮ: ಅಭಿವ್ಯಕ್ತಿಯ ವೇದಿಕೆಯೇ ಅಥವಾ ಮಾನಸಿಕ ಒತ್ತಡಕ್ಕೆ ಕಾರಣವೇ?’ ಮತ್ತು ‘ಮೊಬೈಲ್ ನಮ್ಮ ಕೈಯಲ್ಲಿದೆಯೇ ಅಥವಾ ನಾವು ಮೊಬೈಲ್ ಕೈಯಲ್ಲಿದ್ದೇವೇ?’ ಎಂಬ ಪ್ರಸ್ತುತ ದಿನಗಳ ಜ್ವಲಂತ ವಿಷಯಗಳ ಕುರಿತು ಆಲೋಚನೆಗಳನ್ನು ಮಂಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು, ‘ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳು ನಮ್ಮ ಅಭಿವ್ಯಕ್ತಿಗೆ ಶಕ್ತಿಯುತ ಸಾಧನಗಳಾಗಿದ್ದರೂ, ಬಳಕೆ ಮತ್ತು ವ್ಯಸನದ ನಡುವಿನ ಗೆರೆ ಇಂದು ಮಸುಕಾಗುತ್ತಿದೆ. ಇಂದು ನಾವು ಡಿಜಿಟಲ್ ಸಾಧನಗಳನ್ನು ನಿಯಂತ್ರಿಸುತ್ತಿದ್ದೇವೇ ಅಥವಾ ಅವು ನಮ್ಮನ್ನು ನಿಯಂತ್ರಿಸುತ್ತಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಡಿಜಿಟಲ್ ಯುಗದಲ್ಲಿ ನಿಜವಾದ ಸಾಕ್ಷರತೆ ಎಂದರೆ ಕೇವಲ ಸ್ಮಾರ್ಟ್‌ಫೋನ್ ಬಳಸುವುದು ಮಾತ್ರವಲ್ಲ, ಬದಲಿಗೆ ನಮ್ಮ ಮಾನಸಿಕ ಶಾಂತಿ ಮತ್ತು ನೈಜ ಪ್ರಪಂಚದ ಬೆಳವಣಿಗೆಯತ್ತ ಗಮನ ಹರಿಸಲು ಅದನ್ನು ಯಾವಾಗ ಪಕ್ಕಕ್ಕಿಡಬೇಕು ಎಂಬುದನ್ನು ತಿಳಿದುಕೊಳ್ಳುವುದಾಗಿದೆ’ ಎಂದರು.

ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ನಿವೃತ್ತ ಹಿಂದಿ ಸಹ-ಪ್ರಾಧ್ಯಾಪಕ ಮಾರ್ಸೆಲ್ ಲೂಯಿಸ್ ಮಸ್ಕರೇನ್ಹಸ್ ಮತ್ತು ಪುತ್ತೂರಿನ ಸೇಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ. ಬಿ. ಲತಾ ಅವರು ತೀರ್ಪುಗಾರರಾಗಿ ಆಗಮಿಸಿ ಸ್ಪರ್ಧಿಗಳ ಪ್ರಸ್ತುತಿಯನ್ನು ಮೌಲ್ಯಮಾಪನ ಮಾಡಿದರು.

ಸ್ಪರ್ಧೆಯ ಫಲಿತಾಂಶ:

ಸ್ಪರ್ಧೆಯಲ್ಲಿ ತೃತೀಯ ಬಿ.ಕಾಂ ನ ಮನೀಶ್ ಪಿ.ಎಚ್ ಪ್ರಥಮ ಬಹುಮಾನ, ದ್ವಿತೀಯ ಬಿ.ಕಾಂ.ನ ಫರ್ಹತ್ ಮುಶ್ರೀನ್ ದ್ವಿತೀಯ ಬಹುಮಾನ ಹಾಗೂ ದ್ವಿತೀಯ ಬಿಸಿಎ (ಎಐ ಮತ್ತು ಎಂಎಲ್) ವಿಭಾಗದ ಶೀತಲ್ ರೈ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಪರ್ಫಾರ್ಮಿಂಗ್ ಆರ್ಟ್ಸ್ ಅಸೋಸಿಯೇಷನ್ ಸಂಚಾಲಕ ಪ್ರಶಾಂತ್ ರೈ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ಸಂಯೋಜಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಡಿಂಪಲ್ ಜೆನ್ನಿಫರ್ ಫೆರ್ನಾಂಡಿಸ್ ವಂದಿಸಿ, ವಿದ್ಯಾರ್ಥಿನಿಯರಾದ ಅಪರ್ಣಾ ಮತ್ತು ಸನ್ನಿಧಿ ಪ್ರಾರ್ಥಸಿ, ಗ್ರಂಥಪಾಲಕರಾದ ಅಬ್ದುಲ್ ರೆಹಮಾನ್ ಜಿ., ಮನೋಹರ್ ಎಸ್.ಜಿ. ಮತ್ತು ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಿಂಪಲ್ ಮಿಶೆಲ್ ತಾವ್ರೋ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article