ಉಡುಪಿ ಜಿಲ್ಲಾಧಿಕಾರಿಗೆ ಲೀಗಲ್ ನೋಟೀಸ್

ಉಡುಪಿ ಜಿಲ್ಲಾಧಿಕಾರಿಗೆ ಲೀಗಲ್ ನೋಟೀಸ್

ಶಿರ್ವ: ಕೆಎಸ್‌ಆರ್‌ಟಿಸಿಯ ಉಡುಪಿ-ಮೂಡುಬೆಳ್ಳೆ-ಕಾರ್ಕಳ ಹಾಗೂ ಪಡುಬಿದ್ರಿ-ಕಾರ್ಕಳ, ಮಣಿಪಾಲ-ಉಡುಪಿ-ಮೂಡುಬೆಳ್ಳೆ (ನರ್ಮ್) ಬಸ್ ಸೇವೆ ಸ್ಥಗಿತಗೊಂಡಿದೆ.

ಸಾರ್ವಜನಿಕರ ನಿರಂತರ ಅಹವಾಲುಗಳ ಬಳಿಕ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಾತ್ಕಾಲಿಕ ಪರವಾನಿಗೆ ಕೋರಿ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66, 87(2), 103ರ ಪ್ರಕಾರ ಉಡುಪಿ-ಮೂಡುಬೆಳ್ಳೆ-ಕಾರ್ಕಳ (ಕುಕ್ಕಿಕಟ್ಟೆ-ಬೆಳ್ಳೆ-ಪಳ್ಳಿ-ಬೈಲೂರು ಮೂಲಕ ದಿನಕ್ಕೆ 8 ಟ್ರಿಪ್) ಸರಕಾರಿ ಬಸ್ಸು ಸೇವೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ 24.07.2026ರಂದು ಅರ್ಜಿಯನ್ನು ಸಲ್ಲಿಸಿದ್ದರು.

ಈ ಪ್ರಸ್ತಾವನೆಯನ್ನು 15.09.2026ರಂದು ಪ್ರಾಧಿಕಾರದ ಸಭೆಯಲ್ಲಿ ಅನುಮೋದಿಸಲಾಗಿದ್ದು, ಜಿಲ್ಲಾಧಿಕಾರಿ ಅಂತಿಮ ಆದೇಶ ಹೊರಡಿಸುವುದು ಬಾಕಿ ಇದೆ. ಕಲಂ 103ರ ಡಿಸಿಗೆ ಈ ಪ್ರಸ್ತಾವನೆಯನ್ನು ಸಭೆಯಲ್ಲಿಟ್ಟು ಪರವಾನಿಗೆ ವಿತರಿಸುವುದಷ್ಟೇ ಜಿಲ್ಲಾಧಿಕಾರಿ ಕರ್ತವ್ಯವಾಗಿದ್ದು ಯಾವುದೇ ಅನುಮತಿಯ ಅಗತ್ಯವಿರುವುದಿಲ್ಲ. ಜನವರಿ 2026ರಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು ಸಾರ್ವಜನಿಕರಿಗೆ ತೊಂದರೆ, ಸರಕಾರಕ್ಕೆ ಮುಜುಗರವಾಗುತ್ತಿದ್ದು 7 ದಿನಗಳೊಳಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ನಾಗರಿಕ ಸಮಿತಿ, ಮೂಡುಬೆಳ್ಳೆ ಪರವಾಗಿ ಉಡುಪಿ ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಅವರು ನ. 13ರಂದು ಉಡುಪಿ ಡಿಸಿಗೆ ಲೀಗಲ್ ನೋಟೀಸ್ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article