ಯವಕ ಯುವತಿ ಪ್ರೇಮ ಪ್ರಕರಣ: ಗರ್ಭಿಣಿ ಯುವತಿಯ ಕೊಲೆಗೆ ಯತ್ನ

ಯವಕ ಯುವತಿ ಪ್ರೇಮ ಪ್ರಕರಣ: ಗರ್ಭಿಣಿ ಯುವತಿಯ ಕೊಲೆಗೆ ಯತ್ನ

ಯುವತಿಯ ಮೇಲೆ ಬಿಸಿಲೆ ಘಾಟಿಯಲ್ಲಿ ಹಲ್ಲೆ ನಡೆಸಿ ಪ್ರಜ್ಞೆ ತಪ್ಪಿಸಿ ಚರಂಡಿಗೆ ಬಿಸಾಡಿದ ಯುವಕ

ಸುಬ್ರಮಣ್ಯ: ಕಡಬ ತಾಲ್ಲೂಕು ಕೊಣಾಜೆ ಯುವಕ ಹಾಗೂ ಕೊಂಬಾರಿನ ಯುವತಿಯ ನಡುವಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ, ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ ನಡೆಸಿ ಕೊಲೆಗೆ ಯತ್ನಸಿ ಪ್ರಜ್ಞೆ ತಪ್ಪಿಸಿ ಚರಂಡಿಗೆ ಎಸೆದು ಬಂದಿರುವ ಘಟನೆ ನ.4 ರಂದು ವರದಿಯಾಗಿದೆ.

ಯುವಕ ಮತ್ತು ಯುವತಿ ಬಿಸಿಲೆ ಘಾಟಿಗೆ ತೆರಳಿದ್ದು ನ.4 ರ ಸಂಜೆ ತೆರಳಿದ್ದು ಅಲ್ಲಿ ಯುವಕ ಯುವತಿಯ ಮೇಲೆ ಹಲ್ಲೆ ನಡೆಸಿ, ಆಕೆ ಸತ್ತಿದ್ದಾಳೆಂದು ಭಾವಿಸಿ, ಯುವತಿಯನ್ನು ಅಲ್ಲೇ ಚರಂಡಿಗೆ ಎಸೆದು ಬಂದಿದ್ದಾನೆ. ರಾತ್ರಿಯಿಡೀ ಕಾಡಿನ ನಡುವೆ ಚರಂಡಿಯಲ್ಲಿ ಕಳೆದ ಯುವತಿ, ಬೆಳಗ್ಗೆ ಬಸ್ ಮೂಲಕ ಸುಬ್ರಹ್ಮಣ್ಯ ಠಾಣೆಗೆ ಬಂದು ದೂರು ನೀಡಿರುವುದಾಗಿ ತಿಳಿದು ಬಂದಿದೆ. 

ಪ್ರಕರಣ ದಾಖಲಿಸಿ ಸುಬ್ರಹ್ಮಣ್ಯ ಪೊಲೀಸರು ಯುವಕ ಪ್ರಸಾದ್ ಎಂಬಾತನನ್ನು ಆತ ಕೆಲಸ ಮಾಡುವ ಸುಬ್ರಹ್ಮಣ್ಯದ ವಸತಿ ಗೃಹವೊಂದರಲ್ಲಿ ನ.5 ರಂದು ಕರ್ತವ್ಯದಲ್ಲಿದ್ದಾಗ ಬಂಧಿಸಿ ಯಸಳೂರು ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ತಿಳಿದು ಬಂದಿದೆ.

ಆರೋಪಿ ಯುವಕನಿಗೆ ಬೇರೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂಬ ಮಾತುಗಳು ಕೇಳಿ ಬರುತಿದ್ದು, ಯುವತಿ ಕೂಡ ಸುಬ್ರಹ್ಮಣ್ಯದಲ್ಲೇ ಖಾಸಗಿ ಉದ್ಯೋಗದಲ್ಲಿದ್ದವರೆನ್ನಲಾಗಿದ್ದು ಕಡಬ ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article