ಕಲ್ಮಂಜ ಪ್ರೌಢಶಾಲೆ ಮಕ್ಕಳು ಯೋಗದಲ್ಲಿ ರಾಜ್ಯಮಟ್ಟಕ್ಕೆ

ಕಲ್ಮಂಜ ಪ್ರೌಢಶಾಲೆ ಮಕ್ಕಳು ಯೋಗದಲ್ಲಿ ರಾಜ್ಯಮಟ್ಟಕ್ಕೆ


ಉಜಿರೆ: ಇತ್ತೀಚೆಗೆ ಬಂಟ್ವಾಳ ಕೊಯಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಒಲಂಪಿಯಾಡ್ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಕಲ್ಮಂಜದ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಂಟನೇ ತರಗತಿಯ ತ್ರಿಶಾ ಪ್ರಥಮ ಸ್ಥಾನ, 9ನೇ ತರಗತಿಯ ಆಯುಷ್ ಗೌಡ ಪ್ರಥಮ ಸ್ಥಾನ, 10ನೇ ತರಗತಿಯ ಮನ್ವಿತ ಪ್ರಥಮ ಹಾಗೂ ಹತ್ತನೇ ತರಗತಿಯ ಪ್ರಾಚಿ ದ್ವಿತೀಯ ಸ್ಥಾನ ಪಡೆದು ನವೆಂಬರ್ 14ರಂದು ಮಂಡ್ಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇವರಿಗೆ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಲತಾ ತರಬೇತಿ ನೀಡಿದ್ದು, ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಎಮ್. ಅವರು ಸಹಕರಿಸಿರುತ್ತಾರೆ. ಈ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article