ಧರ್ಮಸ್ಥಳ ಷಡ್ಯಂತ್ರ ಖಂಡಿಸಲು ಸಮಾಲೋಚನಾ ಸಭೆ: ಧರ್ಮಸ್ಥಳ ದೇವಸ್ಥಾನಕ್ಕೂ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ

ಧರ್ಮಸ್ಥಳ ಷಡ್ಯಂತ್ರ ಖಂಡಿಸಲು ಸಮಾಲೋಚನಾ ಸಭೆ: ಧರ್ಮಸ್ಥಳ ದೇವಸ್ಥಾನಕ್ಕೂ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ


ಉಜಿರೆ: ಧರ್ಮಸ್ಥಳ ಗ್ರಾಮಕ್ಕೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದ್ದು ಇಲ್ಲಿ ಸದಾ ಶಾಂತಿ, ನೆಮ್ಮದಿ, ಸಾಮರಸ್ಯ ಹಾಗೂ ಕೋಮುಸೌಹಾರ್ದ ನೆಲೆಸಿದೆ. ಹಿಂದೂಗಳು, ಜೈನರು, ಮುಸ್ಲಿಮರು ಮತ್ತು ಕ್ರೈಸ್ತರು ಸೇರಿದಂತೆ ಸರ್ವಧರ್ಮೀಯರೂ ಇಲ್ಲಿನ ಭಕ್ತರಾಗಿದ್ದು, ಶ್ರದ್ಧಾ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೂ ಕ್ಷೇತ್ರದ ಪ್ರಗತಿ ಹಾಗೂ ಸೇವಾಕಾರ್ಯಗಳ ಯಶಸ್ಸಿನಿಂದ ಮತ್ಸರಗೊಂಡು ಕ್ಷೇತ್ರಕ್ಕೆ ಅಪಪ್ರಚಾರದ ಮೂಲಕ ಮಸಿ ಬಳಿಯುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಆರೋಪಿಸಿದರು.


ಸಮಾಲೋಚನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ್, ಮಹೇಶ್‌ಶೆಟ್ಟಿ ತಿಮರೋಡಿ, ಜಯಂತ ಟಿ. ಹಾಗೂ ಸಂಗಡಿಗರು 2000 ದಿಂದ 2014ರ ವರೆಗೆ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು (ಯು.ಡಿ.ಆರ್) ಆಗಿವೆ ಎಂದು ಸುಳ್ಳು ವದಂತಿ ಪಸರಿಸುತ್ತಿದ್ದಾರೆ.


ಬುರುಡೆ ಗ್ಯಾಂಗ್‌ನ ಸದಸ್ಯರು ವಿವಿಧ ಕಚೇರಿಗಳು, ಆಯೋಗಗಳು ಹಾಗೂ ನ್ಯಾಯಾಲಯಗಳಿಗೆ ಹೋಗಿ ಅಪಪ್ರಚಾರ ಮಾಡುತ್ತಿದ್ದಾರೆ.

2000 ದಿಂದ 2014ರ ವರೆಗೆ ಧರ್ಮಸ್ಥಳ ಮತ್ತು ಸುತ್ತಮುತ್ತ ಆಗಿರುವ ಅಸಹಜ ಸಾವುಗಳು 374 ಎಂದು ಮಾಹಿತಿ ಹಕ್ಕಿನಿಂದ ಪಡೆದ ವಿವರದಲ್ಲಿ ಲಭಿಸಿದೆ.

ಬೆಳ್ತಂಗಡಿ ತಾಲ್ಲೂಕು 81 ಗ್ರಾಮಗಳನ್ನು ಹೊಂದಿದ್ದು, ಜಿಲ್ಲೆಯಲ್ಲೆ ಅತಿ ದೊಡ್ಡ ತಾಲ್ಲೂಕು ಆಗಿದೆ. ಆರಂಭದಲ್ಲಿ ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಪೊಲೀಸ್‌ ಠಾಣೆ ಇತ್ತು. ಪುಂಜಾಲಕಟ್ಟೆ, ವೇಣೂರು, ಧರ್ಮಸ್ಥಳದಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆಗಳು ಆರಂಭಗೊಂಡಿವೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಕೂಡಾ ಇದೇ ಸಂಖ್ಯೆಯನ್ನು ಉಲ್ಲೇಖಿಸಿ ಅಪಪ್ರಚಾರ ಮಾಡುತ್ತಿದ್ದಾರೆ.

ಸುಳ್ಳು ಮಾಹಿತಿ ಹಾಗೂ ಅಪಪ್ರಚಾರದಿಂದ ಧರ್ಮಸ್ಥಳಕ್ಕೆ ಕಳಂಕ ಬಂದಿದೆ.

ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನಕೈಗೊಳ್ಳುವ ಮೊದಲು ಗ್ರಾಮಸ್ಥರ ಅಹವಾಲು ಆಲಿಸಬೇಕು ಎಂದು ಅವರು ಸಲಹೆ ನೀಡಿದರು.

ಮಾನ್ಯ ಮುಖ್ಯಂತ್ರಿ, ಗೃಹಸಚಿವರು, ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರುಗಳಿಗೆ ಮನವಿಯ ಪ್ರತಿಯನ್ನು ಕಳುಹಿಸಿಕೊಡಲಾಯಿತು.

ವಕೀಲ ಕೇಶವ ಬೆಳಾಲು, ಗ್ರಾಮಸ್ಥರು ಉಪಸ್ಥಿತರಿದ್ದು, ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಸೂಕ್ತ ನ್ಯಾಯ ದೊರಕದಿದ್ದಲ್ಲಿ ಮುಂದೆ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀನಿವಾಸ ರಾವ್ ಎಚ್ಚರಿಕೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article