ಲಕ್ಷಾಂತರ ಕುಟುಂಬಗಳ ಸುಂದರ ಬದುಕಿಗೆ ಧರ್ಮಸ್ಥಳ ಯೋಜನೆ ಕಾರಣ: ಡಾ. ಡಿ. ವೀರೇಂದ್ರ ಹೆಗ್ಗಡೆ

ಲಕ್ಷಾಂತರ ಕುಟುಂಬಗಳ ಸುಂದರ ಬದುಕಿಗೆ ಧರ್ಮಸ್ಥಳ ಯೋಜನೆ ಕಾರಣ: ಡಾ. ಡಿ. ವೀರೇಂದ್ರ ಹೆಗ್ಗಡೆ


ಉಜಿರೆ: ಅನೇಕ ಕುಟುಂಬಗಳು ನೆಮ್ಮದಿಯ ಬದುಕನ್ನು ಕಾಣಲು ಧರ್ಮಸ್ಥಳ ಯೋಜನೆಯೇ ಕಾರಣ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಗುರುವಾರ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಯೋಜನೆಯ ಹಿರಿಯ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರ, ಆಸ್ಪತ್ರೆ, ಸಿರಿ ಸಂಸ್ಥೆ ಇನ್ನಿತರ ಕ್ಷೇತ್ರದ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶ್ರಿ ಮಂಜುನಾಥ ಸ್ವಾಮಿಯ ಪ್ರೇರಣೆಯೇ ಮೂಲ ಸ್ಫೂರ್ತಿ. ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳಿಂದ ನೂರಾರು ಕುಟುಂಬಗಳು ನೆಮ್ಮದಿಯ ಬದುಕು ಕಂಡರೆ ನಮಗೆ ಮಾತ್ರ ಸವಾಲು ಎದುರಿಸುವ ಕಾರ್ಯಕ್ರಮವಾಗಿತ್ತು. ಇಂದು ದೂರದ ಊರಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಂದಿ ಯೋಜನೆ ಪ್ರಾರಂಭವಾದ ಬಳಿಕ ಊರಿಗೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿ ಆರ್ಥಿಕ ಪ್ರಗತಿಯನ್ನು ಕಂಡಿದ್ದಾರೆ ಎಂದರು.

44 ವರ್ಷಗಳ ಹಿಂದೆ ಗ್ರಾಮ ಗ್ರಾಮಗಳಿಗೆ, ಮನೆ ಮನೆಗೆ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಬೇಕಾದ ನೆರವು ನೀಡುವ ಮೂಲಕ ಯೋಜನೆ ಪ್ರಾರಂಬಿಸಲಾಯಿತು. ಅಗ ಯುವಕರಾಗಿದ್ದ ಯೋಜನೆಯ ಫಲಾನುಭವಿಗಳು ವಿವಿಧ ಸಾಧನೆಗಳನ್ನು ಮಾಡಿ ಆರ್ಥಿಕವಾಗಿ ಬಲಿಷ್ಟರಾಗಿದ್ದಾರೆ. ಅವರಿಗೂ ವಯಸ್ಸಾಗಿದೆ ನಮಗೂ ವಯಸ್ಸಾಗಿದೆ. ಅದಕ್ಕಾಗಿ ಕ್ಷೇಮ ಸಮಾಚಾರ ತಿಳಿಯಲು ಒಂದೆಡೆ ಸೇರಲು ಕಾರ್ಯಕ್ರಮ ಆಯೋಜಿಸಿದ್ದೇವೆ. ಯೋಜನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರ್ಯಕರ್ತರ ಶ್ರಮವೂ ಕಾರಣ ಎಂದರು.

ಜ್ನಾನ ವಿಕಾಸ ಯೋಜನೆಯ ಸ್ಥಾಪಕಾದ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ನಮಗೆ ಧ.ಗ್ರಾ. ಯೋಜನೆ ಪ್ರಮಾಣಕ್ಕಿಂತ ಹೆಚ್ಚು ಪ್ರೀತಿ, ಕ್ಷೇತ್ರಕ್ಕೆ ಬಂದು ತಮ್ಮ ಬೆಳವಣಿಗೆ ಹಂಚಿಕೊಂಡಾಗ ಅಗುವ ಸಂತಸ ಬೇರೊಂದಿಲ್ಲ. ಇದುವೆ ನಮಗೆ ಯಶಸ್ಸಿನ ಪ್ರಮಾಣ ಪತ್ರ. ಯೋಜನೆ ಪ್ರಾರಂಭವಾದ ಬಳಿಕ ಅನೇಕ ಕಾರ್ಯಕ್ರಮ ಪ್ರಾರಂಭವಾಯಿತು. ಹೆಗ್ಗಡೆಯವರು ಫಲಾನುಭವಿಗಳ ಹಿತಕ್ಕಾಗಿ ಬ್ಯಾಂಕ್‌ಗಳಿಂದ ಕೋಟಿ ಕೋಟಿ ಸಾಲ ಪಡೆದಿದ್ದಾರೆ. ರಾತ್ರಿ ಇಡೀ ಚೆಕ್‌ಗೆ ಸಹಿ ಹಾಕುತ್ತಾ ಅನೇಕ ರಾತ್ರಿಗಳನ್ನು ಕಳೆದಿದ್ದಾರೆ ಎಂದರು. 

ಹೆಗ್ಗಡೆಯವರಿಗೆ ಜನರ ನೆಮ್ಮದಿಗಾಗಿ ಕಾರ್ಯಕ್ರಮ ಹಮ್ಮಿಕೊಂಡರೆ ಅದರಿಂದ ಎಷ್ಟೇ ಕಷ್ಟಗಳು ಬಂದರೂ ಅದನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಹಿಂದೆ ರಸ್ತೆಗಳು ಇಲ್ಲದ ಸಮಯದಲ್ಲೂ ಕಾರ್ಯಕರ್ತರು ಸೈಕಲ್ ನಲ್ಲೇ ಸುತ್ತಿ ಯೋಜನೆಗಾಗಿ ಶ್ರಮಿಸಿದ್ದಾರೆ. ಅವರ ಸೇವೆಯನ್ನು ಮರೆಯುವಂತಿಲ್ಲ. ಯೋಜನೆ ಇನ್ನಷ್ಟು ಬೆಳೆಯಬೇಕೆಂಬುದೇ ನಮ್ಮ ಅಶಯ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಸಂತ ಸಾಲಿಯಾನ್, ಶಾಂತರಾಮ್ ಪೈ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಪಲಾನುಭವಿಗಳಿಗೆ ಸೌಲಭ್ಯಗಳನ್ನು ಡಾ. ಹೆಗ್ಗಡೆಯವರು ವಿತರಿಸಿದರು. ಹಿರಿಯ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿ, ಯೋಜನಾಧಿಕಾರಿ ಯಶೋಧರ  ವಂದಿಸಿದರು. ರಾಮ್ ಕುಮಾರ್, ಮದುರಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article