ನಾಳೆಯಿಂದ ಧರ್ಮಸ್ಥಳ ಯಕ್ಷಗಾನ ಮೇಳದ ಸೇವೆಯಾಟ ಪ್ರದರ್ಶನಾರಂಭ

ನಾಳೆಯಿಂದ ಧರ್ಮಸ್ಥಳ ಯಕ್ಷಗಾನ ಮೇಳದ ಸೇವೆಯಾಟ ಪ್ರದರ್ಶನಾರಂಭ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟದ ಸೇವೆಯಾಟ ನ.12 ರಂದು ಶ್ರೀ  ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಪ್ರಾರಂಭಗೊಳ್ಳಲಿದೆ. 

ನ.28 ರವರೆಗೆ ಪ್ರತಿ ರಾತ್ರಿ ಕ್ಷೇತ್ರದಲ್ಲಿ ಸೇವಾರ್ಥಿಗಳ ಸೇವಾ ಬಯಲಾಟ ಪ್ರದರ್ಶನಗೊಂಡು, ನ.29 ರಂದು ಶ್ರೀ ಮಹಾಗಣಪತಿ ದೇವರ ದಿಗ್ವಿಜಯ ಯಾತ್ರೆಯ   ವಾರ್ಷಿಕ ತಿರುಗಾಟ ಪ್ರಾರಂಭಿಸಲಿದೆ. ಮುಂದಿನ ಮೇ.23 ರವರೆಗೆ ಕರಾವಳಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೇವೆಯ ಪ್ರದರ್ಶನ ನಡೆಯಲಿದ್ದು, ಮೇ.24 ರಂದು ಪತ್ತನಾಜೆಯಂದು ಮೇಳದ ವಾರ್ಷಿಕ ತಿರುಗಾಟ ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ.

ನ.12 ರಂದು ರಾತ್ರಿ 7 ಗಂಟೆಯಿಂದ 12 ಗಂಟೆಯವರೆಗೆ ಪ್ರಥಮ ಸೇವೆಯಾಟದಂಗವಾಗಿ ಕ್ಷೇತ್ರದಲ್ಲಿ ‘ಪಾಂಡವಾಶ್ವಮೇಧ’ ಪೌರಾಣಿಕ ಪ್ರಸಂಗದ ಯಕ್ಷಗಾನ  ಪ್ರದರ್ಶನ ನಡೆಯಲಿದೆ. ಯಕ್ಷಗಾನ ಕಲಾಭಿಮಾನಿಗಳು ಪ್ರೋತ್ಸಾಹಿಸುವಂತೆ ಕ್ಷೇತ್ರದ ಯಕ್ಷಗಾನ ಮಂಡಳಿಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article