Mangalore: ಮಂಗಳೂರಿನ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭ
ಮಂಗಳೂರು: ಕಳೆದ 37 ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ವೈಶಿಷ್ಠ ಪೂರ್ಣವಾಗಿ ತನ್ನದೇ ಆದ ಛಾಪನ್ನು ಮೂಡಿಸಿ ಕ್ರಾಂತಿಯನ್ನೇ ಮಾಡಿದ ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಕೋಚಿಂಗ್‌ನ ನಾನಾ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಎಸ್‌ಎಸ್‌ಎಲ್‌ಸಿ, ಪದವಿ ಪೂರ್ವ ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಬೋರ್ಡ್ ಹಾಗೂ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ರಜಾ ಅವಧಿಯ ಕೋಚಿಂಗ್ ಹಾಗೂ ರಜಾ ಮತ್ತು ರೆಗ್ಯುಲರ್ ಕೋಚಿಂಗ್‌ಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಕ್ರ್ಯಾಶ್ ಕೋರ್ಸ್:
ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ, ಇನ್ನಿತರ ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನೀಟ್ ಮತ್ತು ಸಿಇಟಿ ಪರೀಕ್ಷೆಗಳ ಸಿದ್ಧತೆಗಾಗಿ ಕ್ರ್ಯಾಶ್ ಕೋರ್ಸ್‌ನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಈ ಕೋರ್ಸ್ ಆರಂಭಗೊಳ್ಳಲಿದ್ದು, ನೀಟ್, ಸಿಇಟಿ ಪರೀಕ್ಷೆಯ ತನಕ ಈ ತರಗತಿಗಳು ಇರುತ್ತವೆ. ಈ ತರಬೇತಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಸಿದ್ಧತೆ ಮಾಡಲಾಗುತ್ತದೆ. ಸುಮಾರು ೨೦ ದಿನಗಳಿಂದ ಒಂದು ತಿಂಗಳ ಕಾಲ ನಡೆಯುವ ಈ ಕೋರ್ಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.
ರಜಾ ಅವಧಿ ಮತ್ತು ರಜಾ ಹಾಗೂ ರೆಗ್ಯುಲರ್ ಕೋಚಿಂಗ್:
ಪ್ರಸ್ತುತ ಪ್ರಥಮ ಪಿಯುಸಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂದಿನ ವರ್ಷದ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ, ನೀಟ್, ಜೆಇಇ, ಸಿಇಟಿ ಸಿದ್ಧತೆಗಾಗಿ ರಜಾ ಅವಧಿಯ ಕೋಚಿಂಗ್ ಮತ್ತು ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಇದ್ದು, ಇದರ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಇದ್ದರೆ, ಹೊರಭಾಗದ ವಿದ್ಯಾರ್ಥಿಗಳಿಗೆ ರಜಾ ಅವಧಿಯ ಕೋಚಿಂಗ್ ಇರುತ್ತದೆ. ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಈ ತರಗತಿ ಆರಂಭಗೊಳ್ಳಲಿದೆ. ರಜಾ ಅವಧಿಯ ಸುಮಾರು 75 ದಿನಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಕೋಚಿಂಗ್ ಮತ್ತು ಪೂರಕ ಮೆಟಿರಿಯಲ್ ಸಿಗಲಿದ್ದು, ಇದು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ. ಈ ಕೋಚಿಂಗ್‌ಗೆ ಸೇರುವ ಮೂಲಕ ರಜಾ ದಿನಗಳನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಸ್ಥಳೀಯ ವಿದ್ಯಾರ್ಥಿಗಳಿಗಾಗಿ ನಡೆಸುವ ರಜಾ ಮತ್ತು ರೆಗ್ಯುಲರ್ ಕೋಚಿಂಗ್‌ನಲ್ಲಿ ಮೇಲ್ಕಾಣಿಸಿದ ದಿನಗಳಲ್ಲದೇ ಪ್ರತಿ ವಾರಾಂತ್ಯದಲ್ಲಿ ಸಹಾ ಕೋಚಿಂಗ್ ನೀಡಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೋಚಿಂಗ್:
ಪ್ರಸ್ತುತ ೯ನೇ ತರಗತಿಯಲ್ಲಿ ಕಲಿಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷ ಎಸ್‌ಎಸ್‌ಎಲ್‌ಸಿ ಬರೆಯುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ವಿಶೇಷ ಕೋಚಿಂಗ್ ನೀಡಲಾಗುತಿದ್ದು, ಇದರ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ದೂರದ ಊರಿನ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲಿ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಎಂಬ ಎರಡು ವಿಭಾಗ ಇರುತ್ತದೆ. ಈ ಕೋಚಿಂಗ್ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ಆರಂಭಗೊಳ್ಳಲಿದೆ.
ಎಕ್ಸ್‌ಪರ್ಟ್‌ನ ಕೋಚಿಂಗ್ ವ್ಯವಸ್ಥೆ ಅದೆಷ್ಟೋ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡಿಪಾಯವಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೋಚಿಂಗ್ ಎನ್ನುವುದು ಅತೀ ಅಗತ್ಯ. ಆದ್ದರಿಂದ ಕೋಚಿಂಗ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ?ಯಾಂಕ್‌ಗಳಿಸಿದ್ದಾರೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ ಎನ್ನುತ್ತಾರೆ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್.
2002 ರಿಂದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ 23 ವಿದ್ಯಾರ್ಥಿಗಳು ಬೇರೆಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. 15 ಬಾರಿ ಸಿಇಟಿ, 4 ಬಾರಿ ಪದವಿ ಪೂರ್ವ ಶಿಕ್ಷಣ, ೩ ಬಾರಿ ಕಾಮೆಡ್ ಕೆ, ಒಂದು ಬಾರಿ ಪಾಂಡಿಚೇರಿಯ ಜೆಐಪಿಎಂಇಆರ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಇದು ಸಂಸ್ಥೆಯು ನೀಡುವ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಪ್ರೊ. ನರೇಂದ್ರ ಎಲ್. ನಾಯಕ್.
ಇಲ್ಲಿಯ ಕಲಿಕಾ ವಾತಾವರಣ, ಉತ್ಕೃಷ್ಟ ಮಟ್ಟದ ಬೋಧನೆ, ಸಂದೇಹ ನಿವಾರಣೆಗಾಗಿ ಸಮಯ, ಗ್ರೀಕ್ ಮಾದರಿಯ ಕ್ಲಾಸ್‌ರೂಮ್‌ಗಳು, ಗುಣಮಟ್ಟದ ಪುಸ್ತಕಗಳಿರುವ ಗ್ರಂಥಾಲಯ, ಪಾಠಗಳಿಗೆ ಪೂರಕವಾದ ಸಂಗೀತದ ವಾತಾವರಣ ಹೀಗೆ ಹಲವಾರು ವಿಷಯಗಳು ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಪಡಯಲು ಕಾರಣವಾಗಿವೆ.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಯ ಅಧೀನದಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ನೀಡಲಾಗುತ್ತಿದೆ. ಮಂಗಳೂರಿನ ಕೊಡಿಯಾಲ್‌ಬೈಲ್ ಹಾಗೂ ವಳಚ್ಚಿಲ್‌ನಲ್ಲಿ ಇಂತಹ ಎರಡು ಕ್ಯಾಂಪಸ್‌ಗಳನ್ನು ಸಂಸ್ಥೆಯು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9646407696 ಅಥವಾ 0824-2493696, 2496696 ಸಂಪರ್ಕಿಸಬಹುದಾಗಿದೆ. ಅಥವಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್: www.expertclasses.org ಸಂಪರ್ಕಿಸಬಹುದಾಗಿದೆ.