Moodubidire: ಕಳ್ಳನ ಬಂಧನ
ಮೂಡುಬಿದಿರೆ: ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟಿಂಗ್ ಶಾಪಿನಿಂದ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮೂಡುಬಿದಿರೆಯ ಮಿತ್ತಬೈಲ್ ಪುಚ್ಚಮೊಗರು ನಿವಾಸಿ ಹರೀಶ್ ಪೂಜಾರಿ (46) ಎಂದು ಗುರುತಿಸಲಾಗಿದೆ.
ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟಿಂಗ್ ಶಾಪಿಗೆ ಜ.8 ರಂದು ರಾತ್ರಿ 10.15 ಗಂಟೆಯಿಂದ ಜ.10 ರ ಬೆಳಿಗ್ಗೆ 7.15 ರ ನಡುವಿನಲ್ಲಿ ಕಳ್ಳರು ಈ ಅಂಗಡಿಯ ಹಿಂದಿನ ಗೋಡೆಯನ್ನು ಯಾವುದೋ ಸಾಧನವನ್ನು ಉಪಯೋಗಿಸಿಕೊಂಡು ಕಿಂಡಿಯ ರೀತಿಯಲ್ಲಿ ಹೊಡೆದು ಅಂಗಡಿಯ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸೋನಿ ಕಂಪನೀಯ ಸುಮಾರು 40 ಇಂಚು ಅಗಲದ ಎಲ್‌ಇಡಿ ಟಿವಿ ಹಾಗೂ 1000 ರೂ ನಗದು ಹಣವನ್ನು ಕಳ್ಳತನವಾಗಿತ್ತು.
ಆರೋಪಿಯಿಂದ ಹೋಂಡ ಕಂಪನೀಯ ಆಕ್ಟಿವಾ ಸ್ಕೂಟರ್ ಹಾಗೂ ಸುಮಾರು 50,000 ರೂ. ಮೌಲ್ಯದ ಸೋನಿ ಕಂಪನೀಯ ಸುಮಾರು 40 ಇಂಚು ಅಗಲದ ಎಲ್‌ಇಡಿ ಟಿವಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಒಟ್ಟು ಮೊತ್ತ 1,50,000 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ ಈ ಮೊದಲು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ಕಳ್ಳತನ ಪ್ರಕರಣಗಳು, ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 5 ಕಳ್ಳತನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿದೆ.
ಪತ್ತೆ ಕಾರ್ಯಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ಧಾರ್ಥ ಗೊಯಲ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನಿರ್ದೇಶನದಂತೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಅವರ ತಂಡದವರಾದ ಪೊಲೀಸ್ ಉಪನಿರೀಕ್ಷಕ ದಿವಾಕರ್ ರೈ, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಹುಸೇನ್, ಆಕಿಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಮತ್ತಿತರರು ಪಾಲ್ಗೊಂಡಿದ್ದರು.
