Dharmastala: ಶಿಶಿಲ ಬಸದಿಗೆ ಡಿ. ವೀರೇಂದ್ರ ಹೆಗ್ಗಡೆ ಭೇಟಿ

Dharmastala: ಶಿಶಿಲ ಬಸದಿಗೆ ಡಿ. ವೀರೇಂದ್ರ ಹೆಗ್ಗಡೆ ಭೇಟಿ


ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶಿಶಿಲ ಗ್ರಾಮದಲ್ಲಿರುವ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಆಡಳಿತ ಮಂಡಳಿಯವರೊಂದಿಗೆ ರಚಿಸಿ, ಬಸದಿಯ ಪ್ರಶಾಂತ ಪರಿಸರ ಮತ್ತು ಪ್ರಗತಿ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯ ಪದಾಧಿಕಾರಿಗಲಾದ ಡಾ. ಕೆ. ಜಯಕಿರ್ತಿ ಜೈನ್, ವಿಜಯಕುಮಾರ್, ಯುವರಾಜ ಪೂವಣಿ, ಫಣಿರಾಜ ಜೈನ್, ಜಿನರಾಜ ಪೂವಣಿ, ನಾಗಕನ್ನಿಕಾ, ಶಕುಂತಲಾ, ವತ್ಸಲಾ, ಅಪೂರ್ವ, ವಿಮಲಾ, ಮಂಜುಳಾ, ಚಂಪಾ ಮೊದಲಾದವರು ಉಪಸ್ಥಿತರಿದ್ದರು.

ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ತೋರಣಮುಹೂರ್ತ, ವಿಮಾನಶುದ್ಧಿ, ಚರ್ತುವಿಂಶತಿ ತಥಂಕರರ ಆರಾಧನೆ, ಉತ್ಸವ, ಲಕ್ಷಹೂವಿನ ಪೂಜೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article