Putturu: ಅಪಪ್ರಚಾರ-ಯುವತಿ ಆತ್ಮಹತ್ಯೆ
Monday, March 4, 2024
ಪುತ್ತೂರು: ಅಪಪ್ರಚಾರದಿಂದ ಮನನೊಂದ ಯುವತಿಯೋರ್ವಳು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರು ಎಂಬಲ್ಲಿ ನಡೆದಿದೆ. ಅವಿಭಜಿತ ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದ ಅನಿಲ ಮನೆ ಪದ್ಮಯ್ಯ ಗೌಡ ಅವರ ಪುತ್ರಿ ದಿವ್ಯಶ್ರೀ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಈಕೆಯ ಬಗ್ಗೆ ಕಳೆದ ೨ ತಿಂಗಳ ಹಿಂದೆ ಯಾರೋ ಕಿಡಿಗೇಡಿಗಳು ಅಪಪ್ರಚಾರ ನಡೆಸಿದ್ದು, ಇದರಿಂದ ಮಾನಸಿಕವಾಗಿ ನೊಂದುಕೊಂಡಿದ್ದ ಯುವತಿ ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮನೆಯ ಅಡುಗೆ ಕೋಣೆಯಲ್ಲಿಯೇ ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.