Moodubidire: ಮೂಡುಬಿದಿರೆ ಲಯನ್ಸ್ ಸೇವಾ ಚಟುವಟಿಕೆಗೆ ಜಿಲ್ಲೆಯಲ್ಲಿ ಅಗ್ರಸ್ಥಾನ

Moodubidire: ಮೂಡುಬಿದಿರೆ ಲಯನ್ಸ್ ಸೇವಾ ಚಟುವಟಿಕೆಗೆ ಜಿಲ್ಲೆಯಲ್ಲಿ ಅಗ್ರಸ್ಥಾನ


ಮೂಡುಬಿದಿರೆ: ಲಯನ್ಸ್ 2023-24ನೇ ಸಾಲಿನಲ್ಲಿ ಕೈಗೊಂಡಿರುವ ಅತ್ಯುತ್ತಮ ಸೇವಾ ಕಾರ್ಯಗಳು, ಸದಸ್ಯತ್ವ ಅಭಿಯಾನ, ಅಂತರಾಷ್ಟ್ರೀಯ ಲಯನ್ಸ್ ಗೆ ನೀಡಿರುವ ಗುರುತರವಾದ ದೇಣಿಗೆ, ಲಿಯೋಕ್ಲಬ್ ಸ್ಥಾಪನೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮೂಡುಬಿದಿರೆ ಲಯನ್ಸ್ ಕ್ಲಬ್ ಸೀನಿಯರ್ ಕ್ಲಬ್ ಕೆಟಗರಿಯಲ್ಲಿ ಜಿಲ್ಲಾ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ನಿರ್ಮಾಣ, ಶಿಕ್ಷಣಕ್ಕಾಗಿ ಸಹಾಯ ಅಂಗಾಂಗ ದಾನ ವಿಭಾಗದಲ್ಲಿ ಪ್ರಥಮ ಸಹಿತ ಒಟ್ಟು 27 ಕ್ಯಾಟಗರಿಗಳ ಪೈಕಿ 24 ರಲ್ಲಿ ಪ್ರಥಮ ಸ್ಥಾನವನ್ನು ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಮುಲ್ಕಿಯ ಸುಂದರರಾಮ ಶೆಟ್ಟಿ ಸಭಾಭವನದಲ್ಲಿ ಜುಲೈ 06 ರಂದು ಸಂಜೆ ನಡೆದ ಲಯನ್ಸ್ ಜಿಲ್ಲೆ 317. ಡಿ ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಮೇಲ್ವಿನ್ ಡಿಸೋಜಾ ಅವರಿಂದ ಮೂಡುಬಿದಿರೆ ಲಯನ್ಸ್ ಕ್ಲಬ್ ಬೆಳ್ತಂಗಡಿ ಲಯನ್ಸ್ ಕ್ಲಬ್ ನೊಂದಿಗೆ ಜಂಟಿಯಾಗಿ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿತು.

ವಲಯ್ಯಾಧ್ಯಕ್ಷ ಪ್ರಶಸ್ತಿಯು ಮೂಡುಬಿದರಿ ಲಯನ್ಸ್ ಕ್ಲಬ್ಬಿನ  ದಿನೇಶ್ ಎಂ.ಕೆ. ಅವರಿಗೆ ದೊರೆತಿರುತ್ತದೆ. ಲಯನ್ಸ್ ಅಧ್ಯಕ್ಷ  ಜೋಸ್ಸಿ ಮೆನೇಜಸ್, ಕಾರ್ಯದರ್ಶಿ ಒಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿ ಲಯನ್ ಹರೀಶ್ ತಂತ್ರಿ, ವಲಯಾಧ್ಯಕ್ಷ ಲಯನ್ ದಿನೇಶ್. ಎಂ.ಕೆ., ನಿಯೋಜಿತ ಅಧ್ಯಕ್ಷ ಲಯನ್ ಬೋನವೆಂಚರ್ ಮೆನೇಜಸ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಸ್ಮಿತಾ ಡಿಸೋಜ ಅವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article