ಸೆ.12 ರಿಂದ ಶ್ರೀ ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರ
Thursday, September 5, 2024
ಮಂಗಳೂರು: ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ಸಪ್ಟೆಂಬರ್ ತಿಂಗಳ ೨ ವಾರಗಳ ಕಾಲ ನಡೆಯಲಿರುವ ಯೋಗ ಶಿಬಿರವು ಸೆ.12 ರಂದು ಸಂಜೆ 5 ಗಂಟೆಯಿಂದ 6.30 ರವರೆಗೆ ನಡಡಯಲಿದ್ದು, ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗ ತರಗತಿಯನ್ನು ನಡೆಸಲಿದ್ದಾರೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು. ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಯೋಗ ಚಕ್ರಗಳ ವರ್ಣ ಚಿಕಿತ್ಸೆ ಮಾಹಿತಿ, ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು.
ಯೋಗದ ಮೂಲಕ ಕಾಯಿಲೆಗಳ ನಿಯಂತ್ರಣದ ಬಗ್ಗೆ ತಿಳುವಳಿಕೆ ಮೂಡಿಸುವುದು. ಶಾಂತಿ ನೆಮ್ಮದಿ ಅಭಿವೃದ್ಧಿಯನ್ನು ಯೋಗದ ಮೂಲಕ ಪಡೆಯುವ ಬಗ್ಗೆ ತಿಳುವಳಿಕೆ ನೀಡುವುದರೊಂದಿಗೆ, ಒತ್ತಡ ನಿವಾರಣೆ, ದೈಹಿಕ ಮಾನಸಿಕ ಕಾಯಿಲೆಗಳು ಯೋಗದ ಮೂಲಕ ನಿಯಂತ್ರಣ, ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ, ದೈಹಿಕ ಆರೋಗ್ಯ ಚಿತ್ತ ಶಾಂತಿಗೆ ಯೋಗ ಸಹಕಾರಿ ಎಂಬ ಮಾಹಿತಿಗಳನ್ನು ನೀಡಲಾಗುವುದು.
ಆಸಕ್ತರು ಸಂಜೆ 5 ಗಂಟೆಯಿಂದ ನಡೆಸುವ ರಾಮಕೃಷ್ಣ ಮಠದ ಯೋಗ ಹಾಲ್‌ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2414412ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.