ಜಿಲ್ಲೆಯಲ್ಲಿ ಮರಳು ಹಗರಣ: ಜಿಲ್ಲಾಡಳಿತ ನೇರ ಹೊಣೆ
ಮಂಗಳೂರು: ದ.ಕ. ಜಿಲ್ಲೆಯ ಸಿಆರ್‌ಝೆಢ್ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ನೇರವಾಗಿ ಜಿಲ್ಲಾಡಳಿತ ಹೊಣೆಯಾಗಿದೆ. ಕಳೆದ 4 ವರ್ಷದಿಂದ ಸಿಆರ್‌ಝೆಢ್ ಪ್ರದೇಶದಲ್ಲಿ ಮರಳುಗಾರಿಕೆ ಆರಂಭವಾಗಿಲ್ಲ, ಜಿಲ್ಲೆಯಲ್ಲಿ ಮರಳು ಹಗರಣವೇ ನಡೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಯುವ ಜನತದಳದ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದರು.
ನಗರದ ಖಾಸಗಿ ಹೋಟೆಲಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಝೆಢ್ ಪ್ರದೇಶದಲ್ಲಿ ಮರಳಗಾರಿಕೆಗೆ ಅವಕಾಶ ಇಲ್ಲವೆಂದಾದರೆ ಅಕ್ರಮವಾಗಿ ಹೇಗೆ ನಡೆಸುತ್ತಿದ್ದಾರೆ, ಇದಕ್ಕೆ ಅನುಮತಿ ಕೊಟ್ಟವರು ಯಾರು?. ಹೀಗೆ ರಾತ್ರಿ ಹೊತ್ತು ಸಾಗಿಸುವುದ್ದಕ್ಕಿಂತ ಜಿಲ್ಲಾಡಳಿತಕ್ಕೆ ನ್ಯಾಯಯುತವಾಗಿ ನಡೆಸಬಹುದಲ್ವಾ?. ನ್ಯಾಯವಾಗಿ ಮರಳುಗಾರಿಕೆ ಆರಂಭಿಸಿದರೆ ಜನರಿಗೂ ಕಡಿಮೆ ಬೆಲೆಯಲ್ಲಿ ಮರಳು ಸಿಗುತ್ತದೆ ಇಲ್ಲದಿದ್ದರೆ ಹೆಚ್ಚುವರಿ ಹಣ ನೀಡಬೇಕು, ಈಗಾದರೆ ಮನೆಯ ವೆಚ್ಚ ಹೆಚ್ಚಾಗುತ್ತದೆ ಇದು ಕೂಡ ಜನರಿಗೆ ಹೊರೆ ಬೀಳುತ್ತದೆ. ಗಣಿ ಇಲಾಖೆ ಯಾಕೆ ಎಚ್ಚೆತ್ತುಕೊಂಡಿಲ್ಲ, ಅಕ್ರಮ ಮರಳುಗಾರಿಕೆಯಿಂದ ಏನಾದರೂ ಪಾಲು ಸಿಗುತ್ತದೆಯೇ. ಜಿಲ್ಲಾ ಉಸ್ತುವಾರಿ ಸಚಿವರು ಅನಗತ್ಯ ವಿಚಾರವಾಗಿ ಮಾತಾನಾಡುತ್ತಾರೆ ಅವರ ಜಿಲ್ಲೆಯ ಬಗ್ಗೆ ಅವರಿಗೆ ಏನು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಯಾರ ಹೊಟ್ಟೆ ತುಂಬಿಸಲು ನೀವು ನ್ಯಾಯಯುತ ಮರಳುಗಾರಿಗೆ ಅವಕಾಶ ನೀಡುತ್ತಿಲ್ಲ. ಕೇಂದ್ರ ಸಚಿವರಿಗೂ ಕೂಡ ನಾವು ಮನವಿ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನಾವು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕೂಡ ನಿಯೋಗ ತೆರೆಳಿ ಮನವಿ ಸಲ್ಲಿಸುತ್ತೇವೆ. ಮರಳು ಸಾಗಿಸುವ ವಾಹನದ ಹಿಂದೆ ಮುಂದೆ ಎಸ್ಕಾರ್ಟ್ ರೀತಿ ಜನರಿದ್ದು, ಸಾಮಾನ್ಯರ ಜತೆಗೆ ಅಕ್ರಮ ಮರಳುಗಾರಿಕೆ ನಡೆಸುವವರು ರೌಡಿಗಳಂತೆ ವರ್ತಿಸುತ್ತಾರೆ. ಹೀಗೆ ಆದರೆ ಜನರು ರಾತ್ರಿ ಹೊತ್ತಿನಲ್ಲಿ ಓಡಾಡುವುದು ಹೇಗೆ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ಈ ಸಂದರ್ಭ ಯುವ ಜನತಾದಳದ ಲತೀಶ್ ಕೋಟ್ಯಾನ್, ಸತ್ತಾರ್, ಆಸಿಫ್, ನಿತೇಶ್, ಹಿತೇಶ್ ರೈ ಉಪಸ್ಥಿತರಿದ್ದರು.