ಕಲ್ಲಬೆಟ್ಟು ಸೇ.ಸ. ಸಂಘದ ಮಹಾಸಭೆ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಮೊಗೆರಾಯರಿಗೆ ಸನ್ಮಾನ

ಕಲ್ಲಬೆಟ್ಟು ಸೇ.ಸ. ಸಂಘದ ಮಹಾಸಭೆ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಮೊಗೆರಾಯರಿಗೆ ಸನ್ಮಾನ


ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಂಘದ "ಅಕ್ಷಯಧಾಮ" ಸಭಾಭವನದಲ್ಲಿ ಭಾನುವಾರ ಜರಗಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಮಾತನಾಡಿ 2023- 24ನೇ ವರ್ಷದ ಜುಮ್ಲಾ ಆದಾಯ ರೂ. 1,80,05,339-59 ಮತ್ತು ವೆಚ್ಚ ರೂ 1,62,02,3800-41 ಆಗಿದ್ದು, ರೂ. 18,02,959-18 ನಿವ್ವಳ ಲಾಭ ಆಗಿರುತ್ತದೆ ಎಂದು ತಿಳಿಸಿದರು.

  ಸದಸ್ಯರ ಪಾಲು ಬಂಡವಾಳ: 

2024 ಮಾಚ್ ೯ 31ರ ಅಂತ್ಯಕ್ಕೆ 3223 'ಅ' ತರಗತಿಯ ಸದಸ್ಯರಿದ್ದು  ಸದಸ್ಯರ ಪಾಲು ಬಂಡವಾಳ ರೂ.83,72,100 ಇದ್ದು ಕಳೆದ ಸಾಲಿಗಿಂತ ರೂ 7,84,250 ಪಾಲು ಬಂಡವಾಳ ವೃದ್ಧಿಯಾಗಿರುತ್ತದೆ.

ಠೇವಣಾತಿಗಳು: 

ಕಳೆದ ಸಾಲಿಗಿಂತ ರೂ 71,58,931-14 ಠೇವಣಿ ಹೆಚ್ಚಳವಾಗಿದೆ. ಅಲ್ಲದೆ ಹಿರಿಯ ನಾಗರಿಕರಿಗೆ ವಾಯಿದೆ ಠೇವಣಿಗಳಿಗೆ 0.5% ಅಧಿಕ ಬಡ್ಡಿಯನ್ನು ನೀಡಲಾಗುವುದೆಂದು ತಿಳಿಸಿದರು.

ಸುಕೇಶ್ ಶೆಟ್ಟಿ  ಮತ್ತು  ಚಂದ್ರ ಕೆ.ಹೆಚ್. ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸನ್ಮಾನ: 

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಎಡಪದವು ವಿವೇಕಾನಂದ ಪ.ಪೂ.ಕಾಲೇಜಿನ ಪ್ರೌಢಶಾಲಾ  ವಿಭಾಗದ ಮುಖ್ಯ ಶಿಕ್ಷಕ, ಕಲ್ಲಬೆಟ್ಟು ಸೇ.ಸ.ಸಂಘದ ಸದಸ್ಯ ಸುಬ್ರಹ್ಮಣ್ಯ ಮೊಗೆರಾಯ ಅವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು.

ನಿರ್ದೇಶಕರುಗಳಾದ ಕೆ. ಕೃಷ್ಣರಾಜ ಹೆಗ್ಡೆ, ಎಸ್. ಪ್ರವೀಣ್ ಕುಮಾರ್, ಆಲ್ವೀನ್ ಮಿನೇಜಸ್, ರಾಘವ ಪಿ.ಸುವರ್ಣ, ನಳಿನಿ ಆರ್. ಹೆಗ್ಡೆ, ಶಶಿಕುಮಾರ್ ಶೆಟ್ಟಿ, ಬಾಲಕೃಷ್ಣ ಸಾಲ್ಯಾನ್, ಬಿನಾಕ ವಿ. ಕೋಟ್ಯಾನ್, ಸುದೀಪ್, ಪ್ರಕಾಶ್ ನಾಯ್ಕ್, ಸಂಘದ  ಸಿಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ  ನಿರ್ದೇಶಕ ಆಲ್ವಿನ್ ಎಸ್.ಮಿನೇಜಸ್  ವಂದಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article