ಅ.9 ರಿಂದ 11 ರವರೆಗೆ ‘ಮಂಗಳೂರು ದಾಂಡಿಯಾ ನೈಟ್’
ಮಂಗಳೂರು: ಹರ ಅಸೋಸಿಯೇಟ್ಸ್ ಮತ್ತು ಶ್ರೀ ಹರ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ‘ಮಂಗಳೂರು ದಾಂಡಿಯಾ ನೈಟ್’ ತೊಕ್ಕೊಟ್ಟು ಸಮೀಪದ ಸಂಕೊಳಿಗೆಯ ಶಕ್ತಿ ಮೈದಾನದಲ್ಲಿ ಅ.9, 10 ಮತ್ತು 11ರಂದು ರಾತ್ರಿ ಜರಗಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಸೌಮ್ಯ ಮಾಡ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಂಡಿಯಾ ನೈಟ್‌ನಲ್ಲಿ ದ.ಕ ಮತ್ತು ಕೇರಳದ ವಿವಿಧ ಕಾಲೇಜುಗಳ ಹಾಗೂ ಸಾರ್ವಜನಿಕರ ಒಟ್ಟು 12ಕ್ಕೂ ಅಧಿಕ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ.
ಅ.9ರಂದು ಸಂಜೆ 5.30ಕ್ಕೆ ಬೀರಿಯಿಂದ ಸಂಕೊಳಿಗೆಯವರೆಗೆ ಮೆರವಣಿಗೆ ನಡೆದು 6.45ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾತ್ರಿ 10 ಗಂಟೆಯವರೆಗೆ ನೃತ್ಯ ಕಾರ್ಯಕ್ರಮ ನಡೆಯಲಿದೆ. ಅ.10 ಮತ್ತು 11ರಂದು ರಾತ್ರಿ 7ರಿಂದ 10 ಗಂಟೆಯವರೆಗೆ ನೃತ್ಯ ಪ್ರದರ್ಶನ ನಡೆಯಲಿದೆ.
ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಸಮ್ಮಾನಿಸಲಾಗುವುದು. ಮೆರವಣಿಗೆ, ಸಮಾರಂಭದಲ್ಲಿ ಚಿತ್ರನಟರು, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸವವರು ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು. ಸಾಂಪ್ರದಾಯಿಕ ಉಡುಗೆ ತೊಡುಗೆಗೆ ಮಾತ್ರ ಅವಕಾಶ. ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸುಜಾತಾ ವಿ.ಉಚ್ಚಿಲ, ಸಂಘಟನಾ ಕಾರ್ಯದರ್ಶಿ ಶವಿತ್ ಉಚ್ಚಿಲ, ಪ್ರವೀಣ್ ಬಸ್ತಿ, ಸುರೇಖಾ ಜಯಪ್ರಕಾಶ್, ಸುಕೇಶ್ ಮಂಜನಾಡಿ, ಗೌರವಾಧ್ಯಕ್ಷ ಮೋಹನ್ ಬಿ.ತುಂಬೆ ಉಪಸ್ಥಿತರಿದ್ದರು.