ವಿಧಾನಸಭಾ ಸ್ವೀಕರ್‌ಗಳ ರಾಷ್ಟ್ರೀಯ ಸಮಿತಿಗೆ ಯು.ಟಿ.ಖಾದರ್ ನೇಮಕ

ವಿಧಾನಸಭಾ ಸ್ವೀಕರ್‌ಗಳ ರಾಷ್ಟ್ರೀಯ ಸಮಿತಿಗೆ ಯು.ಟಿ.ಖಾದರ್ ನೇಮಕ


ಮಂಗಳೂರು: ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ಸಭಾಧ್ಯಕ್ಷರ ಅಧಿಕಾರಗಳನ್ನು ಮತ್ತು ನಿಯಮಗಳನ್ನು ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಶೇಷ ಅಂದರೆ ಈ ರಾಷ್ಟ್ರೀಯ ಸಮಿತಿಯಲ್ಲಿ ವಿವಿಧ ರಾಜ್ಯಗಳ ಕೇವಲ 4 ಮಂದಿ ಮಾತ್ರ ಸ್ಪೀಕರ್‌ಗಳಿದ್ದು, ಕರ್ನಾಟಕ ಮತ್ತು ಅದರಲ್ಲೂ ಮಂಗಳೂರು (ಉಳ್ಳಾಲ) ಕ್ಷೇತ್ರದ ಜನತೆಗೆ ಇದೊಂದು ಹೆಮ್ಮೆ ಮತ್ತು ಸಂತೋಷದ ಸುದ್ದಿಯಾಗಿದೆ.

ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ಒಡಿಶಾ ಸ್ಪೀಕರ್ ಸುರಮ ಪಾದಿ, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಫರೀದ್, ನಾಗಲ್ಯಾಂಡ್ ಸ್ಪೀಕರ್ ಷರಿಂಗೈನ್ ಲಾಂಗ್ ಕುಮೆರ್ ಸೇರಿದಂತೆ ಈ ಮೂವರು ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article