
ಧರ್ಮಸ್ಥಳ: ಬಸದಿಯಲ್ಲಿ ವಾರ್ಷಿಕೋತ್ಸವ
Monday, May 5, 2025
ಉಜಿರೆ: ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಮಾರಂಭವು ಮೇ 10, 11 ಮತ್ತು 12ರಂದು ನಡೆಯಲಿದೆ.
ಮೇ 10 ರಂದು ಬೆಳಗ್ಗೆ ಗಂಟೆ 8.45ಕ್ಕೆ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನವಕಲಶ ಅಭಿಷೇಕ. ಸಂಜೆ 4 ಗಂಟೆಯಿಂದ ನಾಂದಿಮಂಗಲ, ಪೂಜಾವಿಧಾನ, ಮಹಾಮಂಗಳಾರತಿ.
ಮೇ 11 ರಂದು ಬೆಳಗ್ಗೆ ಗಂಟೆ 8.30 ರಿಂದ ವಾಸ್ತುಪೂಜಾ ವಿಧಾನ, ಋಷಿಮಂಡಲ ಯಂತ್ರಾರಾಧನೆ, 16 ಕಲಶಾಭಿಷೇಕ. ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಮಂಗಲ ಪ್ರವಚನ. ಸಂಜೆ 4 ಗಂಟೆಯಿಂದ ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮಹಾಮಂಗಳಾರತಿ.
ಮೇ 12 ರಂದು ಬೆಳಗ್ಗೆ 9 ಗಂಟೆಯಿಂದ ಕಲಿಕುಂಡ ಯಂತ್ರಾರಾಧನೆ. ಸಂಜೆ ಗಂಟೆ 5.30ರಿಂದ ಭವ್ಯ ಅಗ್ರೋದಕ ಮೆರವಣಿಗೆ, 108 ಕಲಶ ಮಹಾಭಿಷೇಕ, ಮಹೋತ್ಸವ, ಮಹಾಮಂಗಳಾರತಿ ನಡೆಯಲಿದೆ.