ಆಟೋ ಚಾಲಕರಿಗೆ ಉಚಿತ ಹೃದಯರೋಗ ಜಾಗೃತಿ ಮತ್ತು ತಪಾಸಣೆ

ಆಟೋ ಚಾಲಕರಿಗೆ ಉಚಿತ ಹೃದಯರೋಗ ಜಾಗೃತಿ ಮತ್ತು ತಪಾಸಣೆ


ಮೂಡುಬಿದಿರೆ: ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು ಮೂಡುಬಿದಿರೆ , ಯುವವಾಹಿನಿ (ರಿ. ) ಮೂಡುಬಿದಿರೆ ಘಟಕ  ಮತ್ತು ರಿಕ್ಷಾ ಚಾಲಕ ಮಾಲಕರ ಸಂಘ (ರಿ), ಅಪೋಲೋ ಫಾರ್ಮಸಿ ಹಾಗೂ ವಿ ಹೆಲ್ಪ್ ಟ್ರಸ್ಟ್ (ರಿ) ಅಲಂಗಾರು ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಹೃದಯ ರೋಗ ಜಾಗೃತಿ ಮತ್ತು ತಪಾಸಣಾ ಶಿಬಿರವು ಮೌಂಟ್ ರೋಜರಿ ಅಸ್ಪತ್ರೆಯಲ್ಲಿ ಮಂಗಳವಾರ ನಡೆಯಿತು.

ಹೃದಯ ರೋಗತಜ್ಞ ಡಾ. ದೀತೇಶ್ ಎಂ. ಮಾತನಾಡಿ, ಹೃದಯದ ಹಾರೈಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು. 

ಡಾ. ಮಧುಮಾಲ ಮಾತನಾಡಿ ಮಾನಸಿಕ ಆರೋಗ್ಯವೂ ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ ಎಂದರು.


ಮೌಂಟ್ ರೋಸರಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿಸ್ಟರ್ ಸುನೀತಾ ಶಿಬಿರಕ್ಕೆ ಶುಭ ಹಾರೈಸಿದರು.

ಅಸ್ಪತ್ರೆಯ ನಿರ್ದೇಶಕರಾದ ಸಿಸ್ಟರ್ ಪ್ರೆಸಿಲ್ಲ ಡಿಮೆಲ್ಲೊ ಅಧ್ಯಕ್ಷೀಯ ನೆಲೆಯಲ್ಲಿ ಮಾತಾನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಮೆಬಲ್ ಪಸ್ಸನ್ನ, ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಡಾ. ಪುನೀತ್ ಜೀ ಪಕ್ಕಲ್,ಯುವವಾಹಿನಿ ಮೂಡಬಿದಿರೆ ಘಟಕದ ಅಧ್ಯಕ್ಷ ಮುರಳೀದರ್ ಕೋಟ್ಯಾನ್, ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ದೀಪಕ್, ಅಪೋಲೋ ಪಾರ್ಮಸಿ  ವಿಭಾಗದ ಮುಖ್ಯಸ್ಥ ಶರತ್ ಉಪಸ್ಥಿತರಿದ್ದರು.

ಮಾನವ ಸಂಪನ್ಮೂಲ ಅಧಿಕಾರಿ ವಿನಿತ್ ಅಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ತಿಳಿಸಿದರು. 

ವಿಮಾ ಅಧಿಕಾರಿ ಅನಿಲ್  ಸ್ವಾಗತಿಸಿದರು, ಕಾವ್ಯ ವಂದಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಶುಭಕರ್ ಅಂಚನ್ ಕಾರ್ಯಕ್ರಮ ನಿರೂಪಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article